Bangalore, ಮಾರ್ಚ್ 26 -- ಕರ್ನಾಟಕ ಬಿಜೆಪಿಯಲ್ಲಿ ಫೈರ್‌ ಬ್ರಾಂಡ್‌ ರಾಜಕಾರಣಿ ಎಂದೇ ಹೆಸರಾದ ವಿಜಯಪುರ ಶಾಸಕಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ.

ಬಿಜೆಪಿಯಲ್ಲಿಯೇ ಮೂರೂವರೆ ದಶಕದಿಂದ ಇದ್ದರೂ ಆಗಾಗ ಬಂಡಾಯದ ಸಮರ ಸಾರುತ್ತಲೇ ಇರುವುದರಿಂದ ಪಕ್ಷದಿಂದ ಹೊರ ಹಾಕಲ್ಪಟ್ಟಿದ್ದಾರೆ.

ವಿಜಯಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಯತ್ನಾಳ್‌, ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ವಿಧಾನಪರಿಷತ್‌ ಸದಸ್ಯ ಕೂಡ ಆಗಿದ್ದರು.

ವಿಧಾನಸಭೆ ಚುನಾವಣೆಗೆ ಟಿಕೆಟ್‌ ಸಿಗದೇ ಪಕ್ಷದ ವಿರುದ್ದ ಬಂಡೆದ್ದಿರಿಂದ ಅವರನ್ನು ಮೊದಲ ಬಾರಿಗೆ ಉಚ್ಚಾಟನೆ ಮಾಡಲಾಗಿತ್ತು.

ಜೆಡಿಎಸ್‌ ಸೇರಿ ಮತ್ತೆ ಪಕ್ಷಕ್ಕೆ ಮರಳಿದ ಅವರು ಎರಡನೇ ಬಾರಿ ವಿಧಾನಪರಿಷತ್‌ ಚುನಾವಣೆಗೆ ಬಂಡಾಯವಾಗಿ ಸ್ಪರ್ಧಿಸಿದ್ದಾಗಲೂ ಉಚ್ಚಾಟನೆಗೊಂಡಿದ್ದರು.

ಏಳು ವರ್ಷದ ಹಿಂದೆ ಮತ್ತೆ ಪಕ್ಷಕ್ಕೆ ಮರಳಿ ಈಗ ಸತತ ಎರಡನೇ ಬಾರಿ ವಿಜಯಪುರ ಕ್ಷೇತ್ರದಿಂದ ವಿಧಾನಸಭೆಯನ್ನು ಯತ್ನಾಳ್‌ ಪ್ರವೇಶಿಸಿದ್ದಾರೆ.

ಹಿಂದೆಲ್ಲಾ ಯಡಿಯೂರಪ್ಪ ಅವರ ವಿರ...