ಭಾರತ, ಜುಲೈ 19 -- ಪುತ್ತೂರು: ಯಕ್ಷಗಾನದ ಮೇರು ಪ್ರತಿಭೆ, ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ಇಂದು ಬೆಳಿಗ್ಗೆ ವಿಧಿವಶರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಉಪ್ಪಿನಂಗಡಿ ಸಮೀಪದ ಪಾತಾಳದ ಸ್ವಗೃಹದಲ್ಲಿ ಬೆಳಿಗ್ಗೆ ಉಪಾಹಾರ ಸೇವಿಸಿದ ಸಂದರ್ಭದಲ್ಲಿ ಅಸ್ವಸ್ಥರಾದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರು ವಿಧಿವಶರಾಗಿರುವುದನ್ನು ವೈದ್ಯರು ದೃಢೀಕರಿಸಿದರು. ಪಾತಾಳ ವೆಂಕಟ್ರಮಣ ಭಟ್‌ ಅವರು ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಕಿರಿಯ ಪುತ್ರ ಶ್ರೀರಾಮ - ಗೀತಾ ದಂಪತಿ ಜತೆಗೆ ಪಾತಾಳ ವೆಂಕಟ್ರಮಣ ಭಟ್ ಅವರು ವಾಸವಿದ್ದರು. ಯಕ್ಷ ಕನ್ಯೆಯಾಗಿ ಯಕ್ಷರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಪಾತಾಳ ವೆಂಕಟ್ರಮಣ ಭಟ್ಟರ ಹಿರಿಯ ಪುತ್ರ ಅಂಬಾ ಪ್ರಸಾದ ಅವರು ಈಗ ಯಕ್ಷರಂಗದಲ್ಲಿ ಸ್ತ್ರೀವೇಷಧಾರಿಯಾಗಿ ಗಮನಸೆಳೆದಿದ್ದಾರೆ.

ಯಕ್ಷಗಾನ ಕ್ಷೇತ್ರಕ್ಕೆ, ರಂಗ ಭೂಮಿಗೆ ...