ಭಾರತ, ಏಪ್ರಿಲ್ 24 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 23ರ ಸಂಚಿಕೆಯಲ್ಲಿ ಎಲ್ಲರೂ ರಿಜಿಸ್ಟ್ರೇಷನ್ ಆಫೀಸ್ ಒಳಗೆ ಹೋಗುತ್ತಾರೆ. ರಿಜಿಸ್ಟ್ರೇಷನ್ ಹಂತಗಳು ಆರಂಭವಾದಾಗ ಲಾಯರ್ ಡಾಕ್ಯುಮೆಂಟ್‌ಗಳ ಬಗ್ಗೆ ಕೇಳುತ್ತಾರೆ. ಶ್ರಾವಣಿ ಬಳಿ ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲ ಎಂದೇ ನಂಬಿದ್ದ ವಿಜಯಾಂಬಿಕಾ ಬೇಕು ಅಂತಲೇ 'ಶ್ರಾವಣಿ ಎಲ್ಲಾ ಡಾಕ್ಯುಮೆಂಟ್ಸ್ ತಂದಿದ್ದೀಯಾಮ್ಮ, ಮುಖ್ಯವಾಗಿ ಮ್ಯಾರೇಜ್ ಸರ್ಟಿಫಿಕೇಟ್' ಅಂತಾಳೆ. ಆಗ ಶ್ರಾವಣಿ ಒಂಥರಾ ಮುಖ ಮಾಡುತ್ತಾಳೆ. ಸುಬ್ಬು ಏನೋ ಹೇಳಬೇಕು ಎಂದು ತಡಕಾಡುತ್ತಾನೆ. ಲಾಯರ್ ಕೂಡ ಮ್ಯಾರೇಜ್ ಸರ್ಟಿಫಿಕೇಟ್ ಕೇಳಿದಾಗ ಸುಬ್ಬು ಅದು ಅಂತ ಏನೋ ಹೇಳಲು ಹೋಗುತ್ತಾನೆ. ಅವನನ್ನು ತಡೆಯುವ ಶ್ರಾವಣಿ 'ಮ್ಯಾರೇಜ್ ಸರ್ಟಿಫಿಕೇಟ್ ಇದೆ' ಎಂದು ಹೇಳಿ ಸರ್ಟಿಫಿಕೇಟ್ ಲಾಯರ್ ಮುಂದೆ ಹಿಡಿಯುತ್ತಾಳೆ. ಮ್ಯಾರೇಜ್ ಸರ್ಟಿಫಿಕೇಟ್ ಇರೋಲ್ಲ ಅಂತ ಕನಸು ಕಂಡಿದ್ದು ವಿಜಯಾಂಬಿಕಾಗೂ, ಮದುವೆ ಸತ್ಯ ಹೇಳಿಬಿಡಬೇಕು ಎಂದು ಕಾದಿದ್ದ ಸುಬ್ಬುಗೂ ಶಾಕ್ ಆಗುತ್ತದೆ.

ಶ್ರೀವಲ್ಲಿ ಮಾತು ಕಟ್ಟಿಕೊಂಡು ಮ್ಯಾರೇಜ್ ಸರ...