ಭಾರತ, ಏಪ್ರಿಲ್ 15 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 14ರ ಸಂಚಿಕೆಯಲ್ಲಿ ಅಣ್ಣ-ಅತ್ತಿಗೆ ಕೋಣೆ ಹೊಕ್ಕುವ ಶ್ರೀವಲ್ಲಿ ಬ್ಯಾಗ್‌ನೆಲ್ಲಾ ತಡಕಾಡಿ ಕೊನೆಗೂ ಸುಬ್ಬು-ಶ್ರಾವಣಿ, ವರದ-ವರಲಕ್ಷ್ಮೀ ಹನಿಮೂನ್‌ಗೆ ಯಾವ ಜಾಗಕ್ಕೆ ಹೋಗ್ತಿದ್ದಾರೆ ಅಂತ ಪತ್ತೆ ಮಾಡೇಬಿಟ್ಲು ಶ್ರೀವಲ್ಲಿ. ಕೂಡಲೇ ಅದನ್ನು ವಿಜಯಾಂಬಿಕಾಗೆ ತಿಳಿಸುತ್ತಾಳೆ. ವಿಜಯಾಂಬಿಕಾ ಶ್ರೀವಲ್ಲಿಗೂ ಫ್ಲೈಟ್‌ ಟಿಕೆಟ್ ಸೇರಿ ಅಲ್ಲಿ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆ ಮಾಡ್ತೀನಿ ಅಂತ ಭರವಸೆ ನೀಡ್ತಾರೆ, ಮಾತ್ರವಲ್ಲ ಸುಬ್ಬು-ಶ್ರಾವಣಿ ನಡುವೆ ಏನೂ ಸರಿ ಇಲ್ಲ ಅನ್ನೋದನ್ನು ನೀನು ಸಾಬೀತುಪಡಿಸಿಕೊಂಡೇ ಬರಬೇಕು ಎಂದು ಶ್ರೀವಲ್ಲಿಗೆ ಖಡಾಖಂಡಿತವಾಗಿ ಹೇಳುತ್ತಾಳೆ. ಇತ್ತ ಮನೆಯಲ್ಲಿ ಫ್ರೆಂಡ್ ಮನೆಗೆ ಮಡಿಕೇರಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿಸಲು ಎಲ್ಲಾ ರೆಡಿ ಮಾಡಿಕೊಳ್ಳುತ್ತಾಳೆ ಶ್ರೀವಲ್ಲಿ. ವಿಜಯಾಂಬಿಕಾ ದಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಶ್ರೀವಲ್ಲಿಗೆ ತಾನು ಮಾಡುತ್ತಿರುವುದು ತಪ್ಪು ಎನ್ನುವುದರ ಅರಿವೂ ಇ...