ಭಾರತ, ಮಾರ್ಚ್ 30 -- ಭೂಕಂಪದ ತೀವ್ರತೆ 7ಕ್ಕಿಂತ ಹೆಚ್ಚಿದ್ದರೆ ಅಂತಹ ಭೂಕಂಪನಗಳನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಮ್ಯಾನ್ಮಾರ್‌ನಲ್ಲಿ ಮೊನ್ನೆ(ಮಾರ್ಚ್ 28) ಸಂಭವಿಸಿದ ಭೂಕಂಪದ ತೀವ್ರತೆಯು 7.7 ರಷ್ಟಿತ್ತು. ಇದು ಭಾರಿ ಅನಾಹುತಕ್ಕೆ ಕಾರಣವಾಯಿತು. ಭೂಕಂಪನದ ಪರಿಣಾಮವಾಗಿ ಹಲವು ಕಟ್ಟಡಗಳು ಕುಸಿದು ಬಿದ್ದವು, ರಸ್ತೆಗಳು ಬಿರುಕು ಬಿಟ್ಟವು, ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಜಗತ್ತಿನಲ್ಲಿ ಇಲ್ಲಿಯವರೆಗೆ ಇಂತಹ ಸಾಕಷ್ಟು ಪ್ರಬಲ ಭೂಕಂಪಗಳು ಸಂಭವಿಸಿವೆ, ಅದರಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ಕೆಲವು ವಿನಾಶಕಾರಿ ಭೂಕಂಪದ ಬಗ್ಗೆ ಇಲ್ಲಿದೆ ಮಾಹಿತಿ.

ಚಿಲಿ ಭೂಕಂಪ: ಚಿಲಿಯಲ್ಲಿ 1960ರಲ್ಲಿ ಅತ್ಯಂತ ಭೀಕರ ಭೂಕಂಪ ಸಂಭವಿಸಿತ್ತು. ವಾಲ್ಡಿವಿಯಾ ಮತ್ತು ಪೋರ್ಟೊ ಮಾಂಟ್ ಪ್ರದೇಶಗಳಲ್ಲಿ ಸಂಭವಿಸಿದ್ದ ಈ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 9.5 ರಷ್ಟು ದಾಖಲಾಗಿತ್ತು. ಇದರಲ್ಲಿ ಕನಿಷ್ಠ 16 ಸಾವಿರ ಜನರು ಪ್ರಾಣ ಕಳೆದುಕೊಂಡರು. ಈ ಭೂಕಂಪದಿಂದಾಗಿ, ಹವಾಯಿಯಲ್ಲಿ 61 ಜನರು, ಜಪ...