Delhi, ಮಾರ್ಚ್ 28 -- Myanmar Earthquake: ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ತೀವ್ರಸ್ವರೂಪದ ಭೂಕಂಪ ಎಂದೇ ಕರೆಯಲಾಗುತ್ತಿರುವ ಮ್ಯಾನ್ಮಾರ್‌ನ ಭೀಕರ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಟ್ಟಡಗಳ ಅಡಿ ಕುಸಿದಿರುವ ಜನರ ಮೃತದೇಹಗಳನ್ನು ತೆಗೆಯುವ ಕಾರ್ಯ ನಿರಂತರವಾಗಿ ಮುಂದುವರಿದಿದೆ. 7.7 ತೀವ್ರತೆಯ ಭೂಕಂಪದಿಂದಾಗಿ ಕನಿಷ್ಠ 144 ಜನರು ಸಾವನ್ನಪ್ಪಿದ್ದು, 730 ಜನರು ಗಾಯಗೊಂಡಿದ್ದಾರೆ ಎಂದು ದೇಶದ ಮಿಲಿಟರಿ ಸರ್ಕಾರ ತಿಳಿಸಿದೆ. ಸಾವುನೋವು ಮತ್ತು ಗಾಯಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರನ್ನು ಉಲ್ಲೇಖಿಸಿ ಎಪಿ ತಿಳಿಸಿದೆ.ಆದಾಗ್ಯೂ, ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತನ್ನ ಹೇಳಿಕೆಯಲ್ಲಿ ಭೂಕಂಪದಲ್ಲಿ ಸಾವಿರಾರು ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಿಎ.ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೇ ಬಳಿ ಕೇಂದ್ರಬಿಂದುವನ್ನು ಹೊಂದಿದ್ದ ಭೂಕಂಪ ಮಧ್ಯಾಹ್ನ ಸಂಭವಿಸಿತು. ನಂತರ 6.4 ತೀವ್ರತೆಯ ಬಲವಾದ ಭೂಕಂಪ...