ಭಾರತ, ಮಾರ್ಚ್ 15 -- 18ನೇ ಆವೃತ್ತಿಯ ಐಪಿಎಲ್​ಗೆ ತಂಡಗಳ ಸಿದ್ಧತೆ ಈಗಾಗಲೇ ಪ್ರಾರಂಭವಾಗಿದೆ. ಅದರಂತೆ ರಾಜಸ್ಥಾನ್ ರಾಯಲ್ಸ್ ಆಟಗಾರರು ಕೂಡ ಅಭ್ಯಾಸದಲ್ಲಿ ನಿರತರಾಗಿದ್ದಾರೆ. 2024ರಲ್ಲಿ ಎರಡನೇ ಕ್ವಾಲಿಫೈಯರ್​​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮುಗ್ಗರಿಸಿದ್ದ ಆರ್​ಆರ್​ ತನ್ನ ದ್ವಿತೀಯ ಐಪಿಎಲ್​ ಟ್ರೋಫಿಗೆ ಹುಡುಕಾಟ ನಡೆಸುತ್ತಿದೆ. 2008ರ ಉದ್ಘಾಟನಾ ಆವೃತ್ತಿಯ ಐಪಿಎಲ್​ನಲ್ಲಿ ಶೇನ್ ವಾರ್ನ್ ನಾಯಕತ್ವದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದ ಆರ್​ಆರ್, 16 ವರ್ಷಗಳಿಂದ ಹಲವು ನಾಯಕರು ಬದಲಾದರೂ ಕಿರೀಟ ಮರೀಚಿಕೆಯಾಗಿದೆ. 2022ರಲ್ಲಿ ಫೈನಲ್​ಗೆ ಹೋಗಿದ್ದೇ ಇದುವರೆಗಿನ ಸಾಧನೆ!

ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆರ್​ಆರ್ ಮಾಜಿ ನಾಯಕ ಆಗಿದ್ದ ಹೆಡ್​ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಜೋಡಿ ಅದ್ಭುತಕ್ಕೆ ಸಾಕ್ಷಿಯಾಗಲು ಸಿದ್ಧಗೊಂಡಿದೆ. ಆದರೆ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಅನುಭವಿಗಳ ದಂಡು ಕೊಂಚ ತಗ್ಗಿದೆ ಎನ್ನಬಹುದು. ಅದರಲ್ಲೂ ಮ್ಯಾಚ್​ ವಿನ್ನರ್​​ಗಳಾ...