Bangalore, ಮಾರ್ಚ್ 8 -- ತಮಿಳು ನಿರ್ದೇಶಕ ವಿಜಯ ಕಾರ್ತಿಕೇಯ ಮತ್ತು ಕನ್ನಡ ನಟ ಕಿಚ್ಚ ಸುದೀಪ್‌ ಸಹಯೋಗದ ಮ್ಯಾಕ್ಸ್‌ ಸಿನಿಮಾ ಇತ್ತೀಚೆಗೆ ತೆರೆಕಂಡು ಭರ್ಜರಿ ಹಿಟ್‌ ಆಗಿತ್ತು. ಇದೀಗ ಅಭಿಮಾನಿಗಳು ಮ್ಯಾಕ್ಸ್‌ ಸಿನಿಮಾದ ಫ್ರೀಕ್ವೆಲ್‌ ಅಥವಾ ಸೀಕ್ವೆಲ್‌ ಮಾಡುವಂತೆ ಒತ್ತಾಯಿಸುತ್ತಿರುವುದು ನಿರ್ದೇಶಕ ವಿಜಯ ಕಾರ್ತಿಕೇಯ ಅವರಿಗೆ ಖುಷಿ ತಂದಿದೆ. ಮ್ಯಾಕ್ಸ್‌ ಸಿನಿಮಾವನ್ನು ಫ್ರಾಂಚೈಸಿಯಾಗಿ ಪರಿವರ್ತಿಸುವ ಕುರಿತಾದ ಊಹಾಪೋಹಗಳಿಗೆ ಉತ್ತರಿಸಿದ್ದಾರೆ.

ಇತ್ತೀಚಿನ ಬಿಡುಗಡೆಯಾದ ಮ್ಯಾಕ್ಸ್‌ನಲ್ಲಿ ಕಿಚ್ಚ ಸುದೀಪ್ ಅವರು ಅರ್ಜುನ್ ಮಹಾಕ್ಷಯ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು.ಅರ್ಜುನ್ ಮಹಾಕ್ಷಯ್ ಅವರನ್ನು ಅಪರಾಧಿಗಳು ಮ್ಯಾಕ್ಸ್‌ ಎಂಬ ಅಡ್ಡಹೆಸರಿನಿಂದ ಕರೆಯುತ್ತಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಈ ಸಿನಿಮಾ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾವುದೋ ಒಳ್ಳೆಯ ಕಾರಣಕ್ಕೆ ಅಮಾನತುಗೊಂಡ ಪೊಲೀಸ್‌ ಡ್ಯೂಟಿಗೆ ಜಾಯಿನ್‌ ಆಗುವ ಒಂದು ದಿನದ ಹಿಂದೆ ಮ್ಯಾಕ್ಸ್‌ ಸಿನಿಮಾದ ಕಥೆ ನಡೆಯುತ್ತದೆ.

ಈ ಸಿನಿಮಾ...