ಭಾರತ, ಮಾರ್ಚ್ 25 -- ಮಲಯಾಳಂ ಚಲನಚಿತ್ರ ನಟ ಮೋಹನ್ ಲಾಲ್ ಅವರ ಬಹುನಿರೀಕ್ಷಿತ ಚಿತ್ರ 'L2 ಎಂಪೂರನ್' ಮಾರ್ಚ್ 27 ರಂದು ಬಿಡುಗಡೆಯಾಗುತ್ತಿರುವುದರಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೋಹನ್ ಲಾಲ್ ಅವರ ಕಟ್ಟಾ ಅಭಿಮಾನಿಯಾಗಿರುವ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರು, ವಿದ್ಯಾರ್ಥಿಗಳಿಗೆ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ವೈಜಿಆರ್ ಮಾಲ್‌ನಲ್ಲಿ ಎರಡು ಸ್ಕ್ರೀನ್‌ ಕಾಯ್ದಿರಿಸಿದ್ದಾರೆ. ಗುಡ್ ಶೆಫರ್ಡ್ ಸಂಸ್ಥೆಯು ಕಳೆದ 23 ವರ್ಷಗಳಿಂದ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಪದವಿ ಕೋರ್ಸ್ ನಡೆಸುತ್ತಿದೆ. ಈ ಕಾಲೇಜಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. "ಮಾರ್ಚ್ 26ರಂದು ಪದವಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಅಂದು ಗೋವಾ ರಾಜ್ಯಪಾಲರು, ವಿಶ್ವವಿದ್ಯಾಲಯದ ಉಪಕುಲಪತಿಗಳು ಸೇರಿದಂತೆ ಇತರರು ಅಧ್ಯಕ್ಷತೆ ವಹಿಸಲಿದ್ದಾರೆ. ಮರು ದಿನ ರಜೆ ನೀಡಲಾಗಿದೆ.

ಪದವಿ ಪ್ರದಾನ ಸಮಾರಂಭ ಇರುವ ಕಾರಣ ಸಾಕಷ್ಟು ಮಕ್ಕಳು ಹಾಗೂ ಅವರ ಪಾಲಕರು ಅಂದು ಕ್...