ಭಾರತ, ಮಾರ್ಚ್ 10 -- ಭಾರತ ಕ್ರಿಕೆಟ್ ತಂಡಕ್ಕೆ ಮಾರ್ಚ್‌ 9ರ ಭಾನುವಾರ ವಿಶೇಷ ದಿನ. ನ್ಯೂಜಿಲೆಂಡ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಜಯಗಳಿಸಿದ ಟೀಮ್‌ ಇಂಡಿಯಾ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತು. ರವೀಂದ್ರ ಜಡೇಜಾ ಗೆಲುವಿನ ರನ್ ಬಾರಿಸಿ, ಅಭಿಮಾನಿಗಳನ್ನು ಸಂಭ್ರಮದ ಕಡಲಲ್ಲಿ ತೇಲುವಂತೆ ಮಾಡಿದರು. ಪಂದ್ಯದ ನಂತರ ಆಟಗಾರರು ಮೈದಾನದಲ್ಲಿ ಪರಸ್ಪರ ಸಂಭ್ರಮಿಸಿದರು. ಈ ವೇಳೆ ಆಟಗಾರರ ಕುಟುಂಬ ಸದಸ್ಯರು ಕೂಡಾ ಹಾಜರಿದ್ದರು. ಈ ಸಮಯದಲ್ಲಿ ಅಪರೂಪದ ಕ್ಷಣವೊಂದಕ್ಕೆ ದುಬೈ ಮೈದಾನ ಸಾಕ್ಷಿಯಾಯ್ತು. ಟೀಮ್‌ ಇಂಡಿಯಾ ಅನುಭವಿ ಆಟಗಾರ ವಿರಾಟ್ ಕೊಹ್ಲಿ, ತಮ್ಮ ದೀರ್ಘಕಾಲದ ಸಹ ಆಟಗಾರ ಮೊಹಮ್ಮದ್ ಶಮಿ ಅವರ ತಾಯಿಯನ್ನು ಭೇಟಿಯಾದರು. ಅಲ್ಲದೆ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು.

ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡದ ಆಟಗಾರರಿಗೆ ಕೊಡುವ ಬಿಳಿ ಬಣ್ಣದ ಜಾಕೆಟ್‌ನಲ್ಲಿ ಕಾಣಿಸಿಕೊಂಡ ಕೊಹ್ಲಿ, ಶಮಿ ಅವರ ಕುಟುಂಬದೊಂದಿಗೆ ಫೋಟೋಸ್‌ ತೆಗೆಸಿಕೊಂಡರು. ಅದಕ್ಕೂ ಮುನ್ನ ಶಮಿ ತಾಯಿಯನ್ನು ಭೇಟಿಯಾಗುತ್ತಿದ್ದಂತೆಯೇ ಕಾಲಿಗೆ ನಮಿ...