ಭಾರತ, ಫೆಬ್ರವರಿ 28 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ಭಾರತ-ನ್ಯೂಜಿಲೆಂಡ್ ತಂಡಗಳು (India vs New Zealand) ಮಾರ್ಚ್ 2ರಂದು ಭಾನುವಾರ ಮುಖಾಮುಖಿಯಾಗಲಿವೆ. ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಉಭಯ ತಂಡಗಳಿಗೆ ಇದು ಔಪಚಾರಿಕ ಪಂದ್ಯವಷ್ಟೆ. ಎ ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಇಂಡೋ-ಕಿವೀಸ್ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿವೆ. ಈ ಪಂದ್ಯದಲ್ಲಿ ಸೋತರೂ ಗೆದ್ದರೂ ಯಾವುದೇ ಪ್ರಯೋಜನ ಉಭಯ ತಂಡಗಳಿಗೂ ಇಲ್ಲ! ಅಂತಿಮ ಲೀಗ್ ಪಂದ್ಯಕ್ಕೆ ಭಾರತ ಪ್ಲೇಯಿಂಗ್ 11ನಲ್ಲಿ (India's Predicted Playing XI) ಒಂದೆರಡು ಬದಲಾವಣೆ ಮಾಡುವ ನಿರೀಕ್ಷೆ ಇದೆ.

ಆರಂಭಿಕರೂ ಆದ ನಾಯಕ ರೋಹಿತ್​ ಶರ್ಮಾ (Rohit Sharma) ಮತ್ತು ಉಪನಾಯಕ ಶುಭ್ಮನ್ ಗಿಲ್ (Shubman Gill) ಇಬ್ಬರೂ ಅಭ್ಯಾಸ ಶಿಬಿರದಿಂದ ಹೊರಗುಳಿದಿರುವುದು ಅಚ್ಚರಿ ಮೂಡಿಸಿದೆ. ರೋಹಿತ್​ ಮೊಣಕಾಲು ನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗೆ ಗಿ...