ಭಾರತ, ಜನವರಿ 26 -- ಪ್ರತಿದಿನ ಒಂದು ಕಪ್ ಮೊಸರು ತಿನ್ನುವುದರಿಂದ ಹಲವು ರೀತಿಯ ಪೋಷಕಾಂಶಗಳು ದೊರೆಯುತ್ತವೆ. ನಾವೂ ತುಂಬಾ ಆರೋಗ್ಯವಾಗಿರುತ್ತೇವೆ ಎಂಬುದನ್ನು ಕೇಳಿರುತ್ತೇವೆ. ಆದಾಗ್ಯೂ, ಮೊಸರಿನ ಜೊತೆಗೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಕರುಳಿಗೆ ಹಾನಿಯನ್ನೂ ಉಂಟು ಮಾಡಬಹುದು.

ಮೊಸರು ತಿನ್ನುವುದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಪ್ರೋಬಯಾಟಿಕ್‌ಗಳನ್ನು ಒಳಗೊಂಡಿದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಇದು ತುಂಬಾ ಉತ್ತಮ. ಆದರೆ ಕೆಲವು ಆಹಾರಗಳನ್ನು ಮೊಸರಿನ ಜೊತೆಗೆ ಸೇವಿಸಿದರೆ, ಆ ಆಹಾರ ಸಂಯೋಜನೆಯು ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ. ಜೊತೆಗೆ ಕರುಳಿನ ಸಮಸ್ಯೆಗಳನ್ನೂ ಉಂಟು ಮಾಡಬಹುದು. ಹಾಗಾದರೆ ಮೊಸರಿನೊಂದಿಗೆ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ನೋಡೋಣ.

ಮೀನು ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವ ಅಭ್ಯಾಸ ಹಲವರಿಗಿದೆ. ಕೆಲವರು ಮೀನು ಸಾರಿನ ಜೊತೆ ಮೊಸರನ್ನು ಕಲೆಸಿ ಊಟ ಮಾಡುತ್ತಾರೆ. ಅಂತಹ ತಪ್ಪು ಎಂದಿಗೂ ಮಾಡಬೇಡಿ. ನೀವು ...