Haveri, ಮೇ 23 -- ಹಾವೇರಿ: ನಾನು ರಾಣೆಬೆನ್ನೂರಿನ ಖಾಸಗಿ ಶಾಲೆಯಲ್ಲಿ ಐದನೇ ತರಗತಿವರೆಗೆ ಓದಿದ್ದೆ. ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರ ಗ್ರಾಮದ ಮೊರಾರ್ಜಿ ವಸತಿ ಶಾಲೆಗೆ ಸೇರಿಕೊಂಡು ಐದು ವರ್ಷದಿಂದ ಓದುತ್ತಿದ್ದೇನೆ.ಈಗ ಎಸ್ಎಸ್ಎಲ್‌ಸಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಟಾಪರ್ ಆಗಿದ್ದೇನೆ. ನಿಜಕ್ಕೂ ಮೊರಾರ್ಜಿ ವಸತಿ ಶಾಲೆ ನಿಜಕ್ಕೂ ಚೆನ್ನಾಗಿವೆ. ಅಲ್ಲಿನ ವ್ಯವಸ್ಥೆ, ಶಿಕ್ಷಣದ ಕ್ರಮ, ವಿದ್ಯಾರ್ಥಿಗಳ ಸಮಗ್ರ ಪ್ರಗತಿಗೆ ನೀಡುವ ಒತ್ತು ಓದುವವರಿಗೆ ಪ್ರೇರೇಪಿಸುತ್ತದೆ. ನಾನು ಮೊರಾರ್ಜಿ ಶಾಲೆ ಸೇರಿಕೊಂಡಿದ್ದು ನನ್ನ ಓದಿನ ಕ್ರಮವನ್ನೇ ಬದಲಿಸಿತು. ಮೌಲ್ಯಮಾಪನ ಗೊಂದಲದಿಂದ ಮೂರು ಅಂಕ ಕಡಿಮೆ ಬಂದರೂ ನಂತರ ಅದು ಸರಿಯಾಗಿ ಈಗ 625 ಕ್ಕೆ 625 ಅಂಕಗಳು ಲಭಿಸಿವೆ. ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಆಸೆಯಿದೆ. ಈಗಿನಿಂದಲೇ ತಯಾರಿ ನಡೆಸುವೆ.
ಇದು ಹಾವೇರಿ ಜಿಲ್ಲೆಯ ವಾಣಿಜ್ಯ ನಗರಿ ರಾಣೆಬೆನ್ನೂರು ನಿವಾಸಿ, ಸದ್ಯ ಅದೇ ತಾಲ್ಲೂಕಿನ ಮಾಕನೂರಿನ ಮೊರಾರ್ಜಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.