ಭಾರತ, ಏಪ್ರಿಲ್ 28 -- ಮೊಮ್ಮಗಳು ಹುಟ್ಟಿದ ಮೇಲೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಮಾರ್ಚ್‌ನಲ್ಲಿ ಕ್ರಿಕೆಟರ್ ಕೆಎಲ್‌ ರಾಹುಲ್‌, ಸುನಿಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಮಗಳನ್ನು ಬರ ಮಾಡಿಕೊಂಡಿದ್ದರು. ಅಂದಿನಿಂದ ಇವರ ಕುಟುಂಬದ ಪ್ರತಿಯೊಬ್ಬರು ಮನೆಗೆ ಆಗಮಿಸಿದ ಪುಟಾಣಿ ದೇವತೆ ಜೊತೆ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಮೊಮ್ಮಗಳು ಹುಟ್ಟಿದ ಮೇಲೆ ಸುನೀಲ್ ಶೆಟ್ಟಿ ಆದ್ಯತೆಗಳು ಬದಲಾಗಿವೆ. ಈ ಬಗ್ಗೆ ಇತ್ತೀಚೆಗೆ ಅವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸುನಿಲ್ ಶೆಟ್ಟಿ 'ತಾನು ಹಾಗೂ ಪತ್ನಿ ಮಾನಾ ಶೆಟ್ಟಿ ತಮ್ಮ ಜೀವನಕ್ಕೆ ಬಂದ ಹೊಸ ಪಾತ್ರಕ್ಕಾಗಿ ಸಮಯವನ್ನು ಮೀಸಲಿಟ್ಟಿದ್ದೇವೆ ಎಂದಿದ್ದಾರೆ. ಮಾತ್ರವಲ್ಲ ಇದು ಪ್ರಪಂಚದಲ್ಲೇ ಅತ್ಯಂತ ಸುಂದರ ಭಾವನೆ ಎಂದು ಕೂಡ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ವೇಳೆ ಮೊಮ್ಮಗಳನ್ನು ಮಗಳಿಗೆ ಹೋಲಿಸಿ ಮಾತನಾಡಿದ್ದಾರೆ.

ನಾದಾನಿಯಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಸುನೀಲ್, ...