ಭಾರತ, ಫೆಬ್ರವರಿ 3 -- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೊಗಳು ತುಂಬಾನೇ ಇಷ್ಟವಾಗುತ್ತವೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡ್ತಾನೆ ಇರಬೇಕು ಎನ್ನುವಂಥ ಭಾವನೆ ಬರುವುದು ಸುಳ್ಳಲ್ಲ. ಇದೀಗ ಅಂಥದ್ದೊಂದು ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅದೇನಪ್ಪಾ ಅಂತಹ ವಿಡಿಯೋ ಅಂತೀರಾ, ಅದು ಅಜ್ಜಿ-ಮೊಮ್ಮಗನ ಡಾನ್ಸ್ ವಿಡಿಯೊ.

'ಪುಷ್ಪ 2 ದಿ ರೂಲ್' ಚಿತ್ರದ ಸಖತ್ ಫೇಮಸ್ ಹಾಡು 'ಅಂಗಾರೋ' ಹಾಡಿಗೆ ಅಜ್ಜಿಯೊಬ್ಬರು ಸಖತ್ ಸ್ಟೆಪ್ ಹಾಕಿರುವುದು ಮಾತ್ರವಲ್ಲ, ಶ್ರೀವಲ್ಲಿಯಂತೆ ಎಕ್ಸ್‌ಪ್ರೆಶನ್ ಕೂಡ ನೀಡಿದ್ದಾರೆ. ಈ ಅಜ್ಜಿನ ಜೊತೆ ಮೊಮ್ಮಗ ಕೂಡ ಸೇರಿಕೊಂಡು ಡಾನ್ಸ್‌ಗೆ ಸಾಥ್‌ ನೀಡಿದ್ದಾರೆ. ಅಜ್ಜಿ-ಮೊಮ್ಮಗ ಕಾಂಬಿನೇಷನ್‌ ಈ ಡಾನ್ಸ್ ವಿಡಿಯೊ ಇದೀಗ ಸಖತ್ ವೈರಲ್ ಆಗಿದೆ. ಇವರ ಡಾನ್ಸ್ ನೆಟ್ಟಿಗರ ಮನ ಕದ್ದಿರುವುದು ಸುಳ್ಳಲ್ಲ.

ಸಂಕೇತ್ ದಾವಲ್ಕರ್ ಎನ್ನುವವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನ ಮನೆಯವರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸುತ್ತಿರುವ ಸಂದರ್ಭ ಅಜ...