Bengaluru, ಜನವರಿ 30 -- Lakshmi Nivasa Serial: ಮನೆಗೆ ಬಂದ ಹರೀಶ್ ಮತ್ತು ಸಿಂಚನಾ ಶ್ರೀನಿವಾಸ್ ಜತೆ ಸರಿಯಾಗಿ ಮಾತು ಆಡುವುದಿಲ್ಲ. ಇದನ್ನು ವೀಣಾ ಪ್ರಶ್ನಿಸುತ್ತಾಳೆ. ಹೊಸ ಬ್ಯುಸಿನೆಸ್ ಶುರುಮಾಡುವಾಗ ಅಪ್ಪನನ್ನು ಯಾಕೆ ಕರೆದಿಲ್ಲ ಎಂದು ವೀಣಾ ಸಿಂಚನಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಆಗ ಶ್ರೀನಿವಾಸ್ ಮಧ್ಯಪ್ರವೇಶಿಸಿ ಅವಳನ್ನು ಸಮಾಧಾನಿಸುತ್ತಾಳೆ. ಇತ್ಯ ಇದ್ಯಾವುದರ ಪರಿವೆಯೇ ಇಲ್ಲದಂತೆ ಹರೀಶ ಮೊಬೈಲ್‌ನಲ್ಲಿಯೇ ತಲ್ಲೀನನಾಗಿರುತ್ತಾನೆ. ಫೈನಾನ್ಸ್ ಕಂಪನಿಗೆ ಹೂಡಿಕೆಯಾಗಿರುವ ಹಣವನ್ನು ಆತ ಹಣ ದ್ವಿಗುಣಗೊಳಿಸುವ ಗೇಮ್‌ನಲ್ಲಿ ತೊಡಗಿಸಿಕೊಂಡಿರುತ್ತಾನೆ. ಹೀಗಾಗಿ ಮನೆಯ ಕಲಹದ ಕಡೆ ಆತ ಗಮನ ಕೊಡುವುದಿಲ್ಲ. ಆ ಸಂದರ್ಭದಲ್ಲಿ ಬೇಸರಿಸಿಕೊಂಡ ಶ್ರೀನಿವಾಸ್, ಮತ್ತೆ ಮನೆ ಕಟ್ಟುವ ಮೇಸ್ತ್ರಿಗೆ ಕರೆ ಮಾಡಿ, ಕೆಲಸ ಏನಾದರೂ ಸಿಗಬಹುದೇ ಎಂದು ಕೇಳುತ್ತಾರೆ.

ಇತ್ತ ಆಕ್ಸಿಡೆಂಟ್ ವಿಚಾರವನ್ನೇ ತಲೆಯಲ್ಲಿಟ್ಟುಕೊಂಡ ಸಿದ್ದೇಗೌಡ್ರು, ಭಾವನಾ ಜತೆ ಸರಿಯಾಗಿ ಮಾತೂ ಆಡಲಾರದೆ ಸಂಕಟ ಪಟ್ಟುಕೊಂಡಿರುತ್ತಾರೆ. ಈ ಮಧ್ಯೆ ಭಾವನಾ, ...