ಭಾರತ, ಮಾರ್ಚ್ 6 -- ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ನಮ್ಮ ಜೀವನದ ಒಂದು ಅಂಗವಾಗಿಬಿಟ್ಟಿದೆ. ಒಂದು ದಿನ ನಮ್ಮೊಂದಿಗೆ ಮೊಬೈಲ್ ಇಲ್ಲದಿದ್ದರೆ ಏನೋ ಕಳೆದುಕೊಂಡಂತಹ ಭಾವನೆ ಆವರಿಸಿಕೊಳ್ಳುತ್ತದೆ. ಹಾಗೆಯೇ ಮಕ್ಕಳು ಕೂಡ ತಮ್ಮ ಬಳಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳುವುದು ಒಂದು ಸ್ಟೇಟಸ್ ಎಂದೇ ತಿಳಿದುಬಿಟ್ಟಿದ್ದಾರೆ. ಪೋಷಕರು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಹಾಗೂ ಮಕ್ಕಳನ್ನು ನಿಭಾಯಿಸಲು ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಅಭ್ಯಾಸ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದರೆ ನಿಜಕ್ಕೂ ಯಾವ ವಯಸ್ಸಿಗೆ ಮೊಬೈಲ್ ಕೊಡುವುದು ಸೂಕ್ತ? ಮೊಬೈಲ್ ಫೋನ್‌ನಿಂದ ನಿಮ್ಮ ಮಕ್ಕಳ ಮೇಲೆ ಬೀರುತ್ತಿರುವ ಅಡ್ಡಪರಿಣಾಮಗಳನ್ನು ತಪ್ಪಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ಈಗಿನ ಮಕ್ಕಳಿಗೆ ಮೊಬೈಲ್ ಕೊಡಲಿಲ್ಲವೆಂದರೆ ಊಟ ಸೇರುವುದಿಲ್ಲ. ಅಲ್ಲದೇ ಹೋಂವರ್ಕ್ ಮಾಡಲು, ಕಲಿಕೆಗೆ, ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಮೊಬೈಲ್ ಫೋನ್ ಅವಶ್ಯವಿರುತ್ತದೆ. ಹೀಗೆಂದು ಮಕ್ಕಳು ಹೆಚ್ಚು ಮೊಬೈಲ್ ಉಪಯೋಗಿಸಿದರೆ ...