Bengaluru, ಮೇ 25 -- ಭಾರತೀಯ ಮೋಟಾರ್‌ಸ್ಪೋರ್ಟ್ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಭಾರತವು ಹೆಚ್ಚಾಗಿ ಗುರುತಿಸಿಕೊಳ್ಳದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣರಾದವರು ಬೆಂಗಳೂರಿನ ಕುಶ್ ಮೈನಿ. ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಫಾರ್ಮುಲಾ 2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕುಶ್ ಮೈನಿ ಪಾತ್ರರಾಗಿದ್ದಾರೆ. 25 ವರ್ಷದ ಕುಶ್, ರಿವರ್ಸ್-ಗ್ರಿಡ್ ಸ್ಪ್ರಿಂಟ್ ರೇಸ್‌ನಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಮೊನಾಕೋದಾ ಮಾಂಟೆ ಕಾರ್ಲೊದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವಂತೆ ಮಾಡಿದ್ದಾರೆ. ಅವರ ಗೆಲುವಿನ ನಂತರ ಎಲ್ಲೆಡೆ ಅಭಿನಂದನೆ ಸಲ್ಲಿಸಲಾಗುತ್ತಿದೆ.
ಡಿಎಎಂಎಸ್ ಲ್ಯೂಕಸ್ ಆಯಿಲ್ ತಂಡದ ಪರ ಡ್ರೈವಿಂಗ್ ಮಾಡಿದ ಕುಶ್, ಮಾಂಟೆ ಕಾರ್ಲೊದ ಐತಿಹಾಸಿಕ ಬೀದಿಗಳಲ್ಲಿ ಸಾಗಿ ಪ್ರಸಕ್ತ ಋತುವಿನಲ್ಲೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದರು. ತಮ್ಮ ಚೊಚ್ಚಲ ಎಫ್2 ಗೆಲುವನ್ನು ಸಂಭ್ರಮಿಸಿದರು. ಈ ಗೆಲುವನ್ನು ಭಾರತದಾದ್ಯಂತ ಸಂಭ್ರಮಿಸಲಾಗುತ್ತಿದ್ದು, ಹಲವರು ಶುಭಾಶಯ ಕೋರಿದ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.