ಭಾರತ, ಮೇ 6 -- ನಟಿ ಸಮಂತಾರಿಂದ ವಿಚ್ಛೇದನ ಪಡೆದು ಕಳೆದ ಡಿಸೆಂಬರ್‌ನಲ್ಲಿ ಶೋಭಿತಾ ಧುಲಿಪಾಲರನ್ನು ವಿವಾಹವಾಗಿದ್ದರು ಟಾಲಿವುಡ್ ನಟ ನಾಗಚೈತನ್ಯ. ಇದೀಗ ನಾಗಚೈತನ್ಯ ಹಾಗೂ ಶೋಭಿತಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಹಾಗಾದರೆ ಈ ಸುದ್ದಿ ಹರಡಲು ಕಾರಣವೇನು ನೋಡಿ.

WAVES 2025 ಎಂಬ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಶೋಭಿತಾ ತಮ್ಮ ಹೊಟ್ಟೆ ಕಾಣದಂತೆ ಸೀರೆಯನ್ನು ಮುಚ್ಚಿಕೊಂಡಿದ್ದರು, ಆದರೆ ಹೊಟ್ಟೆಯ ಭಾಗ ಉಬ್ಬಾಗಿ ಕಾಣುತ್ತಿತ್ತು. ಇದರೊಂದಿಗೆ ಇತ್ತೀಚೆಗೆ ಶೋಭಿತಾ ಸಡಿಲವಾದ ಬಟ್ಟೆ ಧರಿಸುತ್ತಿರುವುದು ಈ ಚರ್ಚೆಗೆ ಇನ್ನಷ್ಟು ಪುಷ್ಠಿ ಸಿಗುವಂತೆ ಮಾಡಿದೆ.

ಆದರೆ ಶೋಭಿತಾ ಗರ್ಭಿಣಿ ಎಂಬ ವಿಚಾರವನ್ನು ತಳ್ಳಿ ಹಾಕಿರುವ ನಾಗಚೈತನ್ಯ ಕುಟುಂಬದ ಆಪ್ತಮೂಲಗಳು, ಶೋಭಿತಾ ಗರ್ಭಿಣಿಯಲ್ಲ. ಆಕೆ ಆ್ಯಂಟಿ ಫಿಟ್ ಉಡುಪು ಧರಿಸಿದ್ದಳು. ಅದರಲ್ಲಿ ಹೊಟ್ಟೆಯ ಭಾಗ ಉಬ್ಬಿದಂತೆ ಕಂಡಿದೆ, ಅದು ಆಕೆ ಗರ್ಭಿಣಿ ಎಂಬಂತೆ ಪ್ರತಿಬಿಂಬಿಸಲು ಕಾರಣವಾಗಿದೆ' ಎಂದಿದೆ.

ಇ...