Bengaluru, ಏಪ್ರಿಲ್ 18 -- ಶಾಲೆಯಲ್ಲಿ ಮೊದಲ ದಿನ - ಮಕ್ಕಳಿಗೂ ಹೆತ್ತವರಿಗೂ ಕೂಡ ಇದು ಒಂದು ವಿಶೇಷ ಅನುಭವ. ಇದು ಉತ್ಸಾಹ, ಆತಂಕ, ಭಯ ಮಿಶ್ರಿತ ಅನುಭವವಾಗಿದೆ. ಶಾಲೆಯ ಗೇಟ್ ಅನ್ನು ಮೊದಲ ಬಾರಿ ದಾಟುವ ಕ್ಷಣ ಮಕ್ಕಳ ಜೀವನದ ಹೊಸ ಅಧ್ಯಾಯದ ಆರಂಭವಾಗಿದೆ. ಈ ಪ್ರಯಾಣವು ಸುಗಮವಾಗಲು ಪೋಷಕರ ಕೆಲವೊಂದು ಸಣ್ಣ ಸಿದ್ಧತೆಗಳು ಬಹಳ ಸಹಾಯಕಾರಿಯಾಗಿದೆ. ಏನದು ಸಲಹೆ? ಮುಂದಕ್ಕೆ ಓದಿ

ಮಗುವಿನೊಂದಿಗೆ ಶಾಲೆಗೆ ಒಂದು ಭೇಟಿ ಕೊಡಿ. ಕ್ಲಾಸ್‌ರೂಮ್, ಆಟದ ಸ್ಥಳವನ್ನು ತೋರಿಸಿ. ಶಿಕ್ಷಕರಿದ್ದರೆ ಒಮ್ಮೆ ಮಾತನಾಡಿಸಿ. ಶಾಲೆ ಅರಾ,ಭವಾದ ಬಳಿಕ ಪ್ರತಿದಿನ ನೀನು ಇಲ್ಲಿಗೆ ಬರಬೇಕು, ಓದಬೇಕು, ಕಲಿಯಬೇಕು, ಆಡಬೇಕು ಎನ್ನುವುದನ್ನು ಸಮಾಧಾನದಿಂದ ಹೇಳಿಕೊಡಿ. ಹೊಸ ಹೊಸ ಸ್ನೇಹಿತರು ಸಿಗುತ್ತಾರೆ ಎನ್ನುವುದನ್ನೂ ತಿಳಿಸಿ. ಪರಿಸರ ಪರಿಚಿತವಾದರೆ, ಮಕ್ಕಳಲ್ಲಿ ಆತಂಕ ಕಡಿಮೆಯಾಗುತ್ತದೆ.

ಶಾಲೆ ಎಂಬುದು ಕೇವಲ ಪಾಠವಲ್ಲ, ಕಥೆಗಳು, ಬಣ್ಣದಚಿತ್ರಗಳು, ಆಟಗಳು, ಸ್ನೇಹಿತರು, ಹಾಡು, ನೃತ್ಯ ಎಂದು ಹೇಳಿಕೊಡಿ. ಹೊಸ ಸ್ನೇಹಿತರೊಂದಿಗೆ ಇದೆಲ್ಲವನ್ನೂ ಮಾಡಬಹುದ...