ಭಾರತ, ಏಪ್ರಿಲ್ 3 -- ಪಾಕಿಸ್ತಾನ ತಂಡದ ಮಾಜಿ ಟೆಸ್ಟ್ ಕ್ರಿಕೆಟಿಗ ಫಾರೂಕ್ ಹಮೀದ್ (80) ವಯೋಸಹಜ ಕಾಯಿಲೆಯಿಂದ ಗುರುವಾರ (ಏಪ್ರಿಲ್ 3) ನಿಧನರಾದರು. ಫಾರೂಕ್ ಹಮೀದ್ ನಿಧನಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಸಂತಾಪ ಸೂಚಿಸಿದೆ. ತಮ್ಮ ಆಟದ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಮನ್ನಣೆ ಗಳಿಸಿದ ಹಮೀದ್, 1964ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಆಸೀಸ್‌ನ ಲೆಜೆಂಡರಿ ನಾಯಕ ಇಯಾನ್ ಚಾಪೆಲ್ ಅವರ ವಿಕೆಟ್ ಪಡೆದ ಕೀರ್ತಿ ಅವರಿಗೆ ಸಲ್ಲುತ್ತದೆ. 1961-62 ರಿಂದ 1969-70 ರವರೆಗೆ 43 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಬಲಗೈ ವೇಗದ ಬೌಲರ್ ಆಗಿದ್ದ ಫಾರೂಕ್, 111 ವಿಕೆಟ್ ಪಡೆದು ಮೂರು ಬಾರಿ 5 ವಿಕೆಟ್ ಕಿತ್ತಿದ್ದಾರೆ.
1961-62ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹಮೀದ್, ತಮ್ಮ ವೃತ್ತಿಜೀವನದ ಆರಂಭದಲ್ಲಿತನ್ನ ಪ್ರತಿಭೆ ಜಗತ್ತಿನ ಮುಂದೆ ಅನಾವರಣಗೊಳಿಸಿದ್ದರು. ಹಮೀದ್ 1963ರಲ್ಲಿ ಪಾಕಿಸ್ತಾನ ಈಗಲ್ಸ್ ಪರ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.