Bangalore, ಏಪ್ರಿಲ್ 19 -- ಕೇಸರಿ ಚಾಪ್ಟರ್‌ 2 ಬಾಕ್ಸ್‌ ಆಫೀಸ್‌ ಗಳಿಕೆ ದಿನ 1: ಅಕ್ಷಯ್‌ ಕುಮಾರ್‌, ಆರ್‌. ಮಾಧವನ್‌ ಮತ್ತು ಅನನ್ಯ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕೇಸರಿ ಚಾಪ್ಟರ್‌ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾ. 1919ರ ಜಲಿಯನ್‌ವಾಲಾ ಬಾಗ್‌ ದುರಂತದ ಯಾರಿಗೂ ಗೊತ್ತಿರದ ಕಥೆಯನ್ನು ಹೇಳಿದೆ. ಈ ಸಿನಿಮಾದ ಕುರಿತು ಮೊದಲ ದಿನವೇ ಜನರಿಂದ ಒಳ್ಳೆಯ ಮಾತುಗಳು ಕೇಳಿಬಂದಿವೆ. ಸ್ಯಾಕ್ನಿಲ್ಕ್‌ ಪ್ರಕಟಿಸಿರುವ ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಪ್ರಕಾರ ಮೊದಲ ದಿನ ಈ ಸಿನಿಮಾ ಸುಮಾರು 7 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.

ಆರಂಭಿಕ ಲೆಕ್ಕಾಚಾರಗಳ ಪ್ರಕಾರ ಕೇಸರಿ ಚಾಪ್ಟರ್‌ 2 ಸಿನಿಮಾವು 7.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ಹಿಂದಿ ಆಕ್ಯುಪೆನ್ಸಿ ಶೇಕಡ 17.40ರಷ್ಟಿತ್ತು. ಮಾರ್ನಿಂಗ್‌ ಶೋ ಆಕ್ಯುಪೆನ್ಸಿ ಶೇಕಡ 12.67 ಇತ್ತು. ಅಪರಾಹ್ನ ಮತ್ತು ಸಂಜೆಯ ಆಕ್ಯುಪೆನ್ಸಿ ಶೇಕಡ 19.76ರಷ್ಟಿತ್ತು.

ಅಕ್ಷಯ್‌ ಕುಮಾರ್‌ ಅವರ ಈ ಹಿಂದಿನ ಸಿನಿಮಾ ಸ್ಕೈಫೋರ್ಸ್‌ಗೆ ಹೋಲಿಸಿದರೆ ಕೇಸರಿ ಚಾಪ್ಟರ್‌ 2 ಸಿನಿ...