Bangalore, ಮೇ 2 -- ಹಿಟ್‌ ದಿ ಥರ್ಡ್‌ ಕೇಸ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 1: ಶೈಲೇಶ್‌ ಕೊಲನು ಅವರ ಹಿಟ್‌ (ಹೋಮಿಸೈಡ್ ಇಂಟರ್ವೆನ್ಷನ್ ಟೀಮ್) ಸರಣಿಯ ಮೂರನೇ ಕಂತಾಗಿ ಬಿಡುಗಡೆಯಾದ ಹಿಟ್‌: ದಿ ಥರ್ಡ್‌ ಕೇಸ್‌ ಸಿನಿಮಾವು ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಕ್ನಿಲ್ಕ್ ಪ್ರಕಾರ ನಾನಿ, ಶ್ರೀನಿಧಿ ಶೆಟ್ಟಿ ಮತ್ತು ಪ್ರತೀಕ್ ಸ್ಮಿತಾ ಪಾಟೀಲ್ ನಟಿಸಿರುವ ಈ ಸಿನಿಮಾ ಮೊದಲ ದಿನ 18 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ.

ಟ್ರೇಡ್‌ ವೆಬ್‌ಸೈಟ್‌ ಸಕ್ನಿಲ್ಕ್ ವರದಿ ಪ್ರಕಾರ ಭಾರತದಲ್ಲಿ ಮೊದಲ ದಿನ ಹಿಟ್‌ ಸಿನಿಮಾವು 18.18 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ಆಕ್ಯುಪೆನ್ಸಿ ಅಥವಾ ಚಿತ್ರಮಂದಿರಗಳಲ್ಲಿ ಜನರು ಭರ್ತಿಯಾಗಿರುವ ಪ್ರಮಾಣ ಉತ್ತಮವಾಗಿತ್ತು. ಮೊದಲ ದಿನ ಶೇಕಡ 87.82 ರಷ್ಟು ಆಕ್ಯುಪೆನ್ಸಿ ಇತ್ತು. ಅಪರಾಹ್ನದ ನಂತರ ಶೇಕಡ 92.37ರಷ್ಟು ಆಕ್ಯುಪೆನ್ಸಿ ಇತ್ತು. ಇದು ಹಿಟ್‌ ಸರಣಿ ಸಿನಿಮಾಗಳಲ್ಲಿಯೇ ಅತ್ಯುತ್ತಮ ಮೊದಲ ದಿನದ ಆಕ್ಯುಪೆನ್ಸಿಯಾಗಿದೆ. ಗಳಿಕೆಯಲ್ಲಿಯೂ ಇದು ಅತ್ಯುತ್ತಮವಾಗಿದೆ.

ನ...