ಭಾರತ, ಮಾರ್ಚ್ 2 -- ಆಲಂ ಅಥವಾ ಪಟಿಕ ಕರ್ಪೂರದಂತೆ ಕಾಣುವ ಒಂದು ಬಿಳಿ ಬಣ್ಣದ ವಸ್ತು. ಇದು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಸಿಗುತ್ತದೆ. ಇದನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಹಲವರು ತ್ವಚೆಯ ಆರೈಕೆಗೆ ಹೊರಗಡೆ ಸಿಗುವ ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಅದಕ್ಕಿಂತ ಮನೆಯಲ್ಲಿ ಇರುವ ವಸ್ತುಗಳಿಂದ ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕೆ ಈ ಪಟಿಕ ಹೇಳಿ ಮಾಡಿಸಿದ್ದು. ಇದರಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದು ಹಲವರಿಗೆ ತಿಳಿದಿಲ್ಲ.

ಆಲಂ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಇದನ್ನು ಬಳಸಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಇದನ್ನು ಬಳಸುವುದರಿಂದ ನೀವು ನಿರೀಕ್ಷಿಸದ ರೀತಿಯಲ್ಲಿ ಚರ್ಮವು ಬದಲಾಗುತ್ತದೆ. ಇದು ಚರ್ಮವನ್ನು ಸಾಕಷ್ಟು ಮೃದುವಾಗಿಸುತ್ತದೆ.

ಆಲಂ ಅನ್ನು ಪುಡಿ ಮಾಡಿ ಇದನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಬೇಕು. ಇ...