ಭಾರತ, ಮಾರ್ಚ್ 11 -- ಮೊಟ್ಟೆ ಬುರ್ಜಿ ಅನೇಕ ಮಾಂಸಾಹಾರಿ ಪ್ರಿಯರ ನೆಚ್ಚಿನ ಆಹಾರ ಅಂದ್ರೆ ತಪ್ಪಿಲ್ಲ. ಇದನ್ನು ಅನ್ನ, ಚಪಾತಿ ಮತ್ತು ರೊಟ್ಟಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ. ಸಸ್ಯಾಹಾರಿಗಳಿಗಾಗಿ, ಇಲ್ಲಿ ಶುದ್ಧ ಸಸ್ಯಾಹಾರಿ ಬುರ್ಜಿ ಪಾಕವಿಧಾನ ನೀಡಲಾಗಿದೆ. ಇದು ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡಿ ತಿನ್ನುವಿರಿ. ಇದರ ರುಚಿ ಕೂಡ ಅದ್ಭುತವಾಗಿರುತ್ತದೆ. ಇಷ್ಟಪಡುವುದರಲ್ಲಿ ಸಂಶಯವೇ ಇಲ್ಲ. ವೆಜ್ ಬುರ್ಜಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು - ಒಂದು ಕಪ್, ಅಕ್ಕಿ ಹಿಟ್ಟು - ಕಾಲು ಕಪ್, ಉಪ್ಪು - ರುಚಿಗೆ ತಕ್ಕಷ್ಟು, ಅಡುಗೆ ಸೋಡಾ - ಅರ್ಧ ಚಮಚ, ನೀರು - ಅಗತ್ಯಕ್ಕೆ ತಕ್ಕಷ್ಟು, ಎಣ್ಣೆ - ನಾಲ್ಕು ಚಮಚ, ಜೀರಿಗೆ - ಅರ್ಧ ಚಮಚ, ಬೆಳ್ಳುಳ್ಳಿ ಎಸಳು - ನಾಲ್ಕು, ಕರಿಬೇವು - ಒಂದು ಹಿಡಿ, ಈರುಳ್ಳಿ - ಎರಡು, ಹಸಿ ಮೆಣಸಿನಕಾಯಿ - ಮೂರು, ಅರಿಶಿನ - ಅರ್ಧ ಚಮಚ, ಟೊಮೆಟೊ - ಎರಡು, ಮೆಣಸಿನ ಪುಡಿ - ಒಂದು ಚಮಚ, ಕೊತ್ತಂಬರಿ ಪು...