Bangalore, ಮೇ 6 -- ಬೆಂಗಳೂರು: ಬಾಲಿವುಡ್‌ ನಟಿ, ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಉರ್ಫಿ ಜಾವೇದ್‌ "ಹೊಸ ಬಗೆಯ ಫ್ಯಾಷನ್‌" ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತ ಇರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಭಿನ್ನವಾದ ಫೋಟೋಶೂಟ್‌, ವಿಡಿಯೋಗಳನ್ನು ಹಂಚಿಕೊಳ್ಳುತ್ತ ಫ್ಯಾನ್ಸ್‌ಗೆ ಮುದ ನೀಡುತ್ತಾರೆ. ಇದೀಗ ಅಂಡ ಕ ಪಂಡ ಎಂದು ಮೊಟ್ಟೆಗಳನ್ನೇ ಉಡುಗೆಯಾಗಿ ಧರಿಸಿದ್ದಾರೆ. ಇವರು ಪಾರದರ್ಶಕ ಉಡುಗೆ ತೊಟ್ಟಿದ್ದು, ಲಂಗದಂತೆ ಒಂದಿಷ್ಟು ಮೊಟ್ಟೆಗಳನ್ನು ಸಾಲಾಗಿ ಕಟ್ಟಿಕೊಂಡಿದ್ದಾರೆ. ಇದನ್ನು ಮೊಟ್ಟೆ ಸ್ಕರ್ಟ್‌ ಎನ್ನಬಹುದೇನೋ.

ಈ ವಿಡಿಯೋದಲ್ಲಿ ಮೊದಲಿಗೆ ಉರ್ಫಿ ಜಾವೇದ್‌ ಎರಡು ಮೊಟ್ಟೆಗಳನ್ನು ತೋರಿಸುತ್ತಾರೆ. ಇದಾದ ಬಳಿಕ ಮೊಟ್ಟೆ ಉಡುಗೆಯಲ್ಲಿ ಫ್ಯಾಷನ್‌ ಶೋ ನಡೆಸಿದ್ದಾರೆ. ಉರ್ಫಿ ಜಾವೇದ್‌ ಮೊಟ್ಟೆ ಸ್ಕರ್ಟ್‌ ನೋಡಿ ಅಭಿಮಾನಿಗಳು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. "ನನ್ನ ಪರೀಕ್ಷೆಯ ಅಂಕಗಳನ್ನು ಏಕೆ ಧರಿಸಿದ್ದೀರಿ" ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಈ ಮೂಲಕ ಎಗ್ಸಾಂನಲ್ಲಿ ಮೊಟ್ಟೆ ದೊರಕುತ್ತಿ...