Bangalore, ಮೇ 24 -- ಮೈಸೂರು ಸ್ಯಾಂಡಲ್‌ ಸೋಪ್‌ ಪ್ರಚಾರಕ್ಕೆ ನಟಿ ತಮನ್ನಾ ನೇಮಕ ಮತ್ತು ಆಕೆಗೆ ನೀಡುವ 6.20 ಕೋಟಿ ಸಂಭಾವನೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕನ್ನಡಿಗರೇ ಈ ಸೋಪ್‌ ಅನ್ನು ಉಚಿತವಾಗಿ ಪ್ರಚಾರ ಮಾಡ್ತಾರೆ ಎಂದು ಅವರು ಹೇಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡು ಸುದೀರ್ಘ ನೋಟ್‌ನಲ್ಲಿ ಈ ಮುಂದಿನಂತೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಈಗ ಕಥೆಯೊಂದನ್ನು ಹೇಳಲು ಅಕರ್ಷಕ ಮತ್ತು ವಿಶಿಷ್ಠ ದಾರಿಗಳಿವೆ. ನಿಮ್ಮ ಉತ್ಪನ್ನವನ್ನು ಪ್ರಚಾರ ಮಾಡಲು ಹಳೆಯ ಕಾಲದ ರಾಯಭಾರಿ ಎಂಬ ಸಂಪ್ರದಾಯ ಈಗ ಬೇಕಿಲ್ಲ. ಇದು ತೆರಿಗೆದಾರರ ಹಣ ವ್ಯರ್ಥ ಮಾಡುತ್ತದೆ ಅಷ್ಟೇ" ಎಂದು ರಮ್ಯಾ ಹೇಳಿದ್ದಾರೆ.

"ಸೆಲೆಬ್ರಿಟಿಯೊಬ್ಬರು ರಾಯಭಾರಿಯಾಗಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಈಗ ಸಾರ್ವಜನಿಕರು ಏನನ್ನಾದರೂ ಖರೀದಿಸುತ್ತಾರೆ ಎಂದಿಲ್ಲ"

"ಈ ಸೋಪ್‌ ಹಚ್ಚಿಕೊಂಡರೆ ಸೆಲೆಬ್ರಿಟಿಯಂತೆ ನಾವು ಆಗುವುದಿಲ್ಲ ಎನ್ನುವುದು ಜನರಿಗೆ ಗೊತ್ತು"

"ನಿಮ್ಮ ಉತ್ಪನ್ನ ಜನರಿಗೆ ಅತ್ಯುತ್ತಮವೆನಿಸಿದರೆ ಅವರು ...