Bengaluru, ಮೇ 30 -- ಬೆಂಗಳೂರು: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ (ಕೆಎಸ್ ಡಿಎಲ್) ನ ನೂತನ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವುದಕ್ಕೆ ರಾಜಕೀಯ, ಕನ್ನಡ ಚಿತ್ರರಂಗ ಕನ್ನಡ ಹೋರಾಟಗಾರರು ಸೇರಿಂತೆ ವಿವಿಧ ವಲಯಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಮಾರುಕಟ್ಟೆ ತಜ್ಞರು ಅನೇಕ ವಿಷಯಗಳ ಆಧಾರದಲ್ಲಿ ತಮನ್ನಾ ಅವರನ್ನು ಆಯ್ಕೆ ಮಾಡಿರಬಹುದು ಎಂದು ಪ್ರತಿಪಾದಿಸುತ್ತಿದ್ದಾರೆ. ತಮನ್ನಾ ಅವರ ಜನಪ್ರಿಯತೆ, ಅವರ ಲಭ್ಯತೆ, ಅವರು ರಾಯಭಾರಿಯಾಗಿದ್ದ ಈ ಹಿಂದಿನ ಉತ್ಪನ್ನಗಳ ಯಶಸ್ಸು ಮತ್ತಿತರ ಅಂಶಗಳನ್ನು ಪರಿಗಣಿಸಲಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಎರಡು ವರ್ಷಗಳ ಅವಧಿಗೆ ಅವರಿಗೆ ರೂ.6.20 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಮುಂಬೈ ಮೂಲದ ತಮನ್ನಾ ಭಾಟಿಯಾ ಅವರು ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದ ಕೆಜಿಎಫ್ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಮೈಸೂರು ಒಡೆಯರ್ ಮನೆತನದ ಸಂಸದ ಯದುವೀರ್...