Bangalore, ಜುಲೈ 16 -- ಹಾವೇರಿ: ಕಾಂಗ್ರೆಸ್ ನ ಅಂತರಿಕ ಸಂಘರ್ಷದ ಶಕ್ತಿಪ್ರದರ್ಶನ ಮಾಡಲು ಮೈಸೂರಿನಲ್ಲಿ ಸಮಾವೇಶ ಮಾಡಲಾಗುತ್ತಿದೆ. ಸಮಾವೇಶ ಮಾಡುವಷ್ಟು ಸಾಧನೆ ಕಾಂಗ್ರೆಸ್ ‌ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಾಧನಾ ಸಮಾವೇಶದ ಹೆಸರಿನಲ್ಲಿ ಹಿಂದೆ ಹಾಸನದಲ್ಲಿ ಶಕ್ತಿ ಪ್ರದರ್ಶನ ಮಾಡಬೇಕಿತ್ತು. ಅದು ಈಗ ಮೈಸೂರಿನಲ್ಲಿ ಆಗುತ್ತಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಶಾಸಕರು ಮತ್ತು ಸಚಿವರ ಜೊತೆ ಸಭೆ ಮಾಡಿರುವುದು ಎಲ್ಲವೂ ಸರಿ ಇಲ್ಲ ಎನ್ನುವುದನ್ನು ತೋರಿಸಿದೆ. ಆಂತರಿಕವಾಗಿರುವ ಸಂಘರ್ಷ ಪೂರ್ಣ ವಿರಾಮ ಇಲ್ಲದೇ ಮುಂದುವರೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲಿಯವರೆಗೂ ಇದಕ್ಕೆ ಸ್ಪಷ್ಟತೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಇದು ಮುಂದುವರೆಯುತ್ತದೆ. ಕಾಂಗ್ರೆಸ್ ಹೈಕಮಾಂಡ್ ಗೂ ಈ ಗೊಂದಲ ಬೇಕಾಗಿದೆ ಎನಿಸುತ್ತದೆ ಎಂದರು.

trends.embed.renderExploreWidget("TIMESERIES", {"co...