ಭಾರತ, ಫೆಬ್ರವರಿ 22 -- ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಅವರ ಎರಡನೇ ಗಂಡು ಮಗುವಿನ ನಾಮಕರಣ ಶಾಸ್ತ್ರ ಕಳೆದ ಬುಧವಾರ (ಫೆ 19) ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನೆರವೇರಿತು. ಮೊದಲ ಪುತ್ರನಿಗೆ ಆದ್ಯವೀರ್ ಒಡೆಯರ್‌ ಎಂದು ನಾಮಕರಣ ಮಾಡಿದ್ದ ದಂಪತಿ ಈಗ ಎರಡನೇ ಮಗನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದಾರೆ. ತಾಯಿ ಪ್ರಮೋದಾ ದೇವಿ ಒಡೆಯರ್‌ ಸಮ್ಮುಖದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಅವರ ಎರಡನೇ ಗಂಡು ಮಗುವಿನ ನಾಮಕರಣ ಶಾಸ್ತ್ರ ನೆರವೇರಿಸಿದರು.

ಎರಡನೇ ಮಗನ ನಾಮಕರಣ ಶಾಸ್ತ್ರವನ್ನು ಕುಟುಂಬ ಸಂಪ್ರದಾಯ ಪ್ರಕಾರ ನೆರವೇರಿಸಲಾಗಿದೆ. ಇದು ಖಾಸಗಿ ಕಾರ್ಯಕ್ರಮವಾದ ಕಾರಣ ಆಪ್ತ ನೆಂಟರಿಷ್ಟರನ್ನು ಮಾತ್ರ ಆಹ್ವಾನಿಸಲಾಗಿತ್ತು. ಕಳೆದ ಬುಧವಾರ ಅರಮನೆಯಲ್ಲೇ ಈ ಕಾರ್ಯಕ್ರಮ ನೆರವೇರಿತು ಎಂದು ಸಂಸದರೂ ಆಗಿರುವ ಯದುವೀರ ಒಡೆಯರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ರಾಜಮನೆತನದ ಪುರೋಹಿತರು ನಾಮಕರಣ ಶಾಸ್ತ್ರದ ವಿಧಿ ವಿಧಾ...