ಭಾರತ, ಮಾರ್ಚ್ 9 -- ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಹೀಗಾಗಿ ಬಾಂಬ್ ನಿಷ್ಕ್ರಿಯ ದಳ ಹಾಗೂ ರೈಲ್ವೆ ಪೊಲೀಸರು ಮೈಸೂರಿನ ರೈಲು ನಿಲ್ದಾಣದ ಇಂಚಿಂಚು ಸ್ಥಳವನ್ನೂ ಬಿಡದೆ ಪರಿಶೀಲನೆ ನಡೆಸಿದ್ದಾರೆ‌. ಬಾಂಬ್ ನಿಷ್ಕ್ರಿಯ ದಳದ ಜೊತೆಗೆ ಶ್ವಾನ ದಳ ತೀವ್ರ ತಪಾಸಣೆ ನಡೆಸಿದೆ. ಆಂಧ್ರಪ್ರದೇಶದ ನೆಲ್ಲೂರಿನಿಂದ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ವಾಪಸ್ ಕರೆ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಂಧ್ರಪ್ರದೇಶ ಸಿಎಂ ಚಂದ್ರಬಾಬುನಾಯ್ದು ನನಗೆ ಹೇಳಿದ್ದಾರೆ ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾರೆ.

ಪೊಲೀಸರ ತಪಾಸಣೆ ಬಳಿಕ ಇದೊಂದು ಹುಸಿಬಾಂಬ್ ಬೆದರಿಕೆ ಕರೆ ಎಂಬುದು ದೃಢವಾಗಿದೆ. ಆ ಬಳಿಕ ಪೊಲೀಸರು, ರೈಲ್ವೆ ಸ್ಟೇಶನ್‌ನಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ನಿರಾಳರಾಗಿದ್ದಾರೆ. ಬೆದರಿಕೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ.

ನಂಜನಗೂಡಿನಲ್ಲಿ ಬಾರ್ ಕ್ಯಾಷಿಯರ್‌ಗೆ ಆವಾಜ್ ಹಾಕಿ ಬಿಯರ್, ವಿಸ್ಕಿ ಬಾಟಲ್ ಹೊತ್ತೊಯ್ದ ಘಟನೆ ನಡೆದಿದೆ. ಪುಂಡರ ಹಾವಳ...