Mysuru, ಮೇ 4 -- ಮಿನಿ ದಸರಾ ಎಂದೇ ಖ್ಯಾತಿಯಾಗಿರುವ ಮೈಸೂರು ಕರಗ ಮಹೋತ್ಸವ ಶನಿವಾರ ಆರಂಭಗೊಂಡು ಭಾನುವಾರ ಬೆಳಿಗ್ಗೆ ಅಂತ್ಯಗೊಂಡಿತು.

ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸುತ್ತಾ ಬಂದಿರುವ ಕರಗ ಮಹೋತ್ಸವವು ಕಳೆದ ವರ್ಷ ನೂರು ವರ್ಷ ಪೂರೈಸಿತ್ತು,

ಶತಮಾನಗಳ ಹಿಂದೆ ಮೈಸೂರಿಗೆ ಸಾಂಕ್ರಾಮಿಕ ರೋಗರುಜಿನಗಳು ಹರಡಿದ ಪರಿಣಾಮ ಪ್ರತಿನಿತ್ಯ ಹತ್ತಾರು ಮಂದಿ ಸಾವನ್ನಪ್ಪುತ್ತಿದ್ದರು. ಮನೆ ಮಂದಿಯೆಲ್ಲಾ ರೋಗದಿಂದ ಬಳಲುತ್ತಿದ್ದರೇ ಮಳೆಯೂ ಇಲ್ಲದೇ ಕ್ಷಾಮ ಕೂಡ ಆವರಿಸಿತ್ತು. ಈ ಎಲ್ಲಾ ಜಂಜಾಟಗಳ ನಡುವೆ ಪ್ರತಿನಿತ್ಯ ಸಾವನ್ನಪ್ಪುತ್ತಿದ್ದವರ ಅಂತ್ಯ ಸಂಸ್ಕಾರ ನಡೆಸುವುದು ಸವಾಲಿನ ಕೆಲಸವಾಗಿತ್ತು. ಇದರಿಂದ ದಿಕ್ಕು ತೋಚದಾದ ಜನರೆಲ್ಲರೂ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಮೊರೆ ಹೋದರು

ಅಂದಿನಿಂದ ಆರಂಭವಾದ ಮೈಸೂರು ಕರಗ ಮಹೋತ್ಸವಕ್ಕೆ ಈ ಬಾರಿ 101ನೇ ವರ್ಷದ ಸಂಭ್ರಮ. ಮೈಸೂರು ಕರಗ ಮಹೋತ್ಸವಕ್ಕೆ ಒಂದು ತಿಂಗಳಿರುವಂತಯೇ ಯುಗಾದಿಯ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಶ್ರೀ...