Mandya, ಏಪ್ರಿಲ್ 7 -- KS Narasimha Swamy: ಮೈಸೂರು ಮಲ್ಲಿಗೆಯ ಕವಿ ಎಂದೇ ಹೆಸರುವಾಸಿಯಾಗಿರುವ ಕೆಎಸ್‌ ನರಸಿಂಹಸ್ವಾಮಿ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆ ತಾಲ್ಲೂಕಿನ ಕಿಕ್ಕೇರಿ ಗೌರವ ಸಿಗುವ ದಿನಗಳು ಸಮೀಪಿಸುತ್ತಿವೆ. ಈಗಾಗಲೇ ಕಿಕ್ಕೇರಿ ಗ್ರಾಮದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರಿನಲ್ಲಿ ಕೆಲವು ಕೆಲಸಗಳು ಆಗಿದ್ದರೂ ಅವು ಹೇಳಿಕೊಳ್ಳುವ ಮಟ್ಟಕ್ಕೆ ಇಲ್ಲ. ಏಕೆಂದರೆ ಹಲವು ಕವಿಗಳ ತವರೂರನ್ನು ವಿಭಿನ್ನವಾಗಿ ಅಭಿವೃದ್ದಿಪಡಿಸಿ ಅಲ್ಲಿ ಸ್ಮಾರಕ,. ಬಯಲುರಂಗಮಂದಿರ, ನಿರಂತರ ಚಟುವಟಕೆ ರೂಪಿಸುವ ಕೆಲಸವಾಗಿದೆ. ಆದರೆ ಕೆ.ಎಸ್.ನರಸಿಂಹಸ್ವಾಮಿ ಅವರು ಇದ್ದ ಮನೆ ಪಾಳು ಬಿದ್ದು ಎಷ್ಟೋ ವರ್ಷ ಆಗಿದೆ. ಅದನ್ನು ಈಗಾಗಲೇ ಕೆಲವರು ಖರೀದಿಸಿದ್ದೂ ಆಗಿದೆ. ಆದರೆ ಕಿಕ್ಕೇರಿ ಸ್ಮಾರಕ ಆಗಬೇಕು ಎನ್ನುವ ಬೇಡಿಕೆ ಕೇಳಿ ಬರುತ್ತಲೇ ಇತ್ತು. ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ದೆಸೆ ಜತೆಗೆ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್‌ನ ನಿರಂತರ ಪ್ರಯತ್ನದ ಫಲವಾಗಿ ಒಂದಷ್ಟು ಕೆಲಸವಾಗುವ ಸಮಯ ಕೂಡಿ ಬರುತ್ತಿದೆ.

ಕ...