ಭಾರತ, ಮಾರ್ಚ್ 2 -- ಮೈಸೂರು-ಹುಣಸೂರು ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಭೀತಿ ಸೃಷ್ಟಿಸುವಂತೆ ಸ್ಕೂಟರ್‌ನಲ್ಲಿ ಅಪಾಯಕಾರಿ ಸ್ಟಂಟ್ಸ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದ ಯುವಕನನ್ನು ಇಲವಾಲ ಪೊಲೀಸ್ ಠಾಣೆಯ ಪಿಎಸ್ಐ ಬಿ ಆರ್ ಮಹೇಶ್ ಕುಮಾರ್ ಬಂಧಿಸಿದ್ದಾರೆ. ಮೈಸೂರಿನ ಮೇಟಗಳ್ಳಿ ಬಡಾವಣೆ ಏಕಲವ್ಯನಗರದ ನಿವಾಸಿ ಪ್ರಜ್ವಲ್ (22) ಬಂಧಿತ ಯುವಕ. ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರಗಳನ್ನು ಅಪ್‌ಲೋಡ್ ಮಾಡುವ ಖಾತೆಗಳ ಮೇಲೆ ನಿಗಾ ಇಡುವ ಜವಾಬ್ದಾರಿ ಹೊತ್ತ ಪೊಲೀಸ್ ಸಿಬ್ಬಂದಿ ಅಭಿಷೇಕ್ ಅವರು, ಪ್ರಜ್ವಲ್ ಅಪ್‌ಲೋಡ್ ಮಾಡಿರುವ ಫೋಟೋಗಳನ್ನು ಪತ್ತೆಹಚ್ಚಿದ್ದಾರೆ.

ಇಲವಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಬಿ ಆರ್ ಮಹೇಶ್ ಕುಮಾರ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಹೋಂಡಾ ಡಿಯೋ ವಾಹನ ನೋಂದಣಿ ಸಂಖ್ಯೆ KA-12 S 5574 ದ್ವಿಚಕ್ರವಾಹನದಲ್ಲಿ ಮುಖ್ಯರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಅಪಾಯಕಾರಿ...