ಭಾರತ, ಫೆಬ್ರವರಿ 17 -- ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಗಲಭೆಗೆ ಕಾರಣವಾದ ಸೋಷಿಯಲ್ ಮೀಡಿಯಾ ಪೋಸ್ಟ್‌ ಹಾಕಿದ್ದ ಆರೋಪಿ ಸತೀಶ್‌ ಅಲಿಯಾಸ್ ಪಾಂಡುರಂಗಗೆ ನ್ಯಾಯಾಲಯ ಇಂದು (ಫೆ 17) ಷರತ್ತು ಬದ್ಧ ಜಾಮೀನು ನೀಡಿದೆ ಎಂದು ಆರೋಪಿ ಪರ ವಕೀಲ ಅ.ಮ. ಭಾಸ್ಕರ ತಿಳಿಸಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ, ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದ ಆರೋಪಿ ಸತೀಶ್‌ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಒಬ್ಬರ ಶೂರಿಟಿ ಪಡೆದುಕೊಂಡು ಬಿಡುಗಡೆ ಮಾಡುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶಿಸಿದೆ ಎಂದು ಅ. ಮ. ಭಾಸ್ಕರ ಹೇಳಿದ್ದಾರೆ.

ಆರೋಪಿ ಸತೀಶ್‌ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಈ ರೀತಿಯ ಅಪರಾಧಗಳಲ್ಲಿ ಮತ್ತೆ ಭಾಗಿಯಾಗಬಾರದು. ಪೊಲೀಸ್ ಠಾಣೆಗೆ ಹೋಗಿ ತನಿಖೆಗೆ ಸಹಕರಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿದೆ.

ಬಿ ಎನ್ ಎಸ್ ಕಾಯ್ದೆಯಡಿ 299 ಅಕ್ರಾಕ್ಟ್ ಆಗಬೇಕು ಅಂದ್ರೆ ಅವಹೇಳನಕಾರಿಯಾಗಿ ಚಿತ್ರ ಪ್ರಕಟವಾಗಬೇಕು. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯ...