ಭಾರತ, ಫೆಬ್ರವರಿ 13 -- Dali Danjay Wedding: ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿದೆ. ಧನಂಜಯ್ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಸಂಪ್ರದಾಯದಂತೆ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದ ಡಾಲಿ ಧನಂಜಯ್ ನಂತರ ಮನೆಯಲ್ಲಿ ಮನೆದೇವರ ಪೂಜೆ ನೆರವೇರಿಸಿದ್ದಾರೆ. ಇದೇ ಶನಿವಾರ ಭಾನುವಾರ (ಫೆ 15, 16) ಮೈಸೂರಿನಲ್ಲಿ ನಡೆಯಲಿರುವ ಡಾಲಿ ಧನ್ಯತಾ ವಿವಾಹಕ್ಕೆ ಡಾಲಿ ಅಭಿಮಾನಿಗಳಿಗೂ ಆಮಂತ್ರಣ ನೀಡಿದ್ದಾರೆ. ಧನಂಜಯ ಧನ್ಯತಾ ಮದುವೆಗೆ ಸ್ಟ್ಯಾಂಪ್ ನೀಡಿ ಅಂಚೆ ಇಲಾಖೆ ಶುಭಾಶಯ ತಿಳಿಸಿದೆ. ಇನ್ ಲ್ಯಾಂಡ್ ಲೆಟರ್ ಮಾದರಿ ಮದುವೆ ಆಮಂತ್ರಣವನ್ನು ಭಾರತೀಯ ಅಂಚೆ ಇಲಾಖೆ ಮೆಚ್ಚಿ ಸ್ಟಾಂಪ್ ಉಡುಗೊರೆ ನೀಡಿದೆ.

ಧನಂಜಯ ಧನ್ಯತಾ ಮದುವೆಗೆ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದ ಅಂಚೆ ಇಲಾಖೆಯು ಧನು-ಧನ್ಯ ವಿವಾಹಕ್ಕೆ ವಿಶೇಷ 12 ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದೆ. ವೆಡ್ಡಿಂಗ್ ವಿಷ್ ಹಾಗೂ ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷ ಸ್ಟ್ಯಾಂಪ್ ಉಡುಗೊರೆಯಾಗಿ ಬಂದಿದೆ. ...