Mysuru, ಏಪ್ರಿಲ್ 29 -- ಮೈಸೂರು: ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸುತ್ತಾ ಬಂದಿರುವ ಕರಗ ಮಹೋತ್ಸವಕ್ಕೆ ಈ ವರ್ಷವೂ ಧಾರ್ಮಿಕ ವಿಧಿವಿಧಾನಗಳು ಮಂಗಳವಾರ ಶುರುವಾಗಿವೆ. ಅಂದಿನ ಆಳರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಚಾಲನೆ ಪಡೆದುಕೊಂಡಿರುವ ಶ್ರೀ‌ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ 101 ನೇ ವರ್ಷದ ಮೈಸೂರು ಕರಗ ಮಹೋತ್ಸವಕ್ಕೆ ಇಂದು ಅದ್ದೂರಿಯ ಚಾಲನೆ ‌ಸಿಕ್ಕಿದೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ನೆಲೆ ನಿಂತಿರುವ ಚಾಮುಂಡಿ ಬೆಟ್ಟದಿಂದ ಇಂದು ಹಸಿ ಕರಗ ತರುವ ಮೂಲಕ ಕರಗ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು. ಚಾಮುಂಡಿಬೆಟ್ಟದಿಂದ ಹೊರಟ ಹಸಿ‌ಕರಗ ಇಟ್ಟಿಗೆಗೂಡಿಗೆ ಆಗಮಿಸುತ್ತಿದ್ದಂತೆ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಯಿತು.

ಇಂದಿನಿಂದ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ. ಮೇ 3ರಂದು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ನಡೆಯಲಿರುವ ಕರಗ ಮಹೋತ್ಸವದ ಮೆರವಣಿಗೆಗೆ ಸಕಲ ಸಿದ್ದತೆ ನಡೆದಿದೆ.ಮೇ 3 ರಂದು ರಾತ್ರಿ 8 ಗಂಟೆ ಸುಮಾರಿಗೆ ಇಟ್...