ಭಾರತ, ಫೆಬ್ರವರಿ 18 -- ಮೈಸೂರು: ಬೈಕ್ ಸವಾರನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಿ ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಬಳಿ ನಡೆದಿದೆ. 21 ವರ್ಷದ ಯುವಕ ಪವನ್ ಮೃತ ಬೈಕ್ ಸವಾರ. ತಿ ನರಸೀಪುರ ತಾಲೂಕಿನ ಕರೋಹಟ್ಟಿ ಗ್ರಾಮದ ನಿವಾಸಿಯಾಗಿರುವ ಪವನ್, ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಪಘಾತದ ರಭಸಕ್ಕೆ ಯುವಕನ ಹೆಲ್ಮೆಟ್‌ ಕೂಡಾ ಪಕ್ಕಕ್ಕೆ ಬಿದ್ದಿದೆ. ಬೈಕ್‌ ಒಂದು ಕಡೆ, ಯುವಕನ ಮೃತದೇಹ ಒಂದು ಕಡೆ ಬಿದ್ದಿದೆ.

ಸ್ಥಳಕ್ಕೆ ತಿ ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಮೈದಾನದಲ್ಲಿ ನೇಣು ಬಿಗಿದ‌ ಸ್ಥಿತಿಯಲ್ಲಿ ಪುರುಷ ಹಾಗು ಮಹಿಳೆ ಶವ ಪತ್ತೆಯಾಗಿದೆ. ಮೈಸೂರಿನ ವಿಜಯನಗರದ ಮೈದಾನದಲ್ಲಿ ಶವ ಪತ್ತೆಯಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಮೈದಾನದ ವಾಟರ್ ಟ್ಯಾಂಕ್‌ಗೆ ನಿರ್ಮಿಸಲಾಗಿದ್ದ ಕಬ್ಬಿಣದ ಏಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತ...