ಭಾರತ, ಫೆಬ್ರವರಿ 14 -- ಮೈಸೂರು: ಚಿರತೆ ಮತ್ತು ಅದರ ಮರಿಗಳನ್ನು ಒಂದಾಗಿಸುವಲ್ಲಿ ಚಿರತೆ ಕಾರ್ಯಪಡೆ ಯಶಸ್ವಿಯಾಗಿದೆ. ಆರು ದಿನಗಳ ನಿರಂತರ ಪ್ರಯತ್ನದ ನಂತರ ತಾಯಿ ಮತ್ತು ಪುಟ್ಟ ಮರಿಗಳು ಒಂದಾಗಿದೆ. ಫೆಬ್ರುವರಿ 7ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮೈಸೂರು ತಾಲ್ಲೂಕು ವರುಣ ಹೋಬಳಿಯ ಭುಗತಹಳ್ಳಿ ಗ್ರಾಮದ ಎಸ್. ಎಂ. ಪಿ ಲೇಔಟ್‌ನ ಪೈಪ್ ಕಲ್ವೆರ್ಟ್‌ನಲ್ಲಿ 2 ಚಿರತೆ ಮರಿಗಳು ಇರುವುದರ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಮೇರೆಗೆ ಮೈಸೂರಿನ ಚಿರತೆ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ.

ಯಾರೂ ಯಾವುದೇ ರೀತಿಯಲ್ಲಿಯೂ ಭಯ ಪಡುವ ಅಗತ್ಯವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಅಲ್ಲದೆ ಮುಂದೆ ಸ್ಥಳೀಯರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಫೆಬ್ರುವರಿ 9ರಂದು ಇನ್ನೊಂದು ಚಿರತೆ ಮರಿಯನ್ನು ರಕ್ಷಿಸಲಾಗಿತ್ತು. ಆ ಬಳಿಕ ನಿರಂತರವಾಗಿ ತಾಯಿ ಚಿರತೆಯನ್ನು ಹುಡುಕುವ ಕಾರ್ಯಾಚರಣೆ ನಡೆಸುತ್ತಾ ಬರಲಾಗಿತ್ತು. ಇದೀಗ 6 ದಿನಗಳ ನಿರಂತರ ಪ್ರಯತ್ನದಿಂದ ಹಾಗೂ ಲೇಔಟ್‌...