ಭಾರತ, ಮಾರ್ಚ್ 15 -- ಮೈಸೂರು: ನೀರಿನಲ್ಲಿ ಮುಳುಗಿ ಮೂವರು ಮೃತರಾಗಿರುವ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲೂಕಿನಲ್ಲಿ ನಡೆದಿದೆ. ಒಂದೇ ಕುಟುಂಬದ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಜಲ ಸಮಾಧಿಯಾಗಿದ್ದಾರೆ. ತಾತ ಚೌಡಯ್ಯ (70) ಹಾಗೂ ಮೊಮ್ಮಕ್ಕಳಾದ ಭರತ್ (13), ಧನುಷ್ (10) ಮೃತ ದುರ್ದೈವಿಗಳು. ತಿ ನರಸೀಪುರ ಪಟ್ಟಣದ ತಿರುಮಕೂಡಲಿನ ನಿವಾಸಿಗಳಾಗಿರುವ ಇವರು ಕಾವೇರಿ ನದಿ ಬಳಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ.

ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗುತ್ತಿದ್ದ ಹಿನ್ನೆಲೆ ಮಕ್ಕಳ ರಕ್ಷಣೆಗೆ ಅಜ್ಜ ಚೌಡಯ್ಯ ಕೂಡಾ ತೆರಳಿದ್ದಾರೆ. ಇಬ್ಬರು ಮೊಮ್ಮಕ್ಕಳನ್ನು ರಕ್ಷಿಸಲಾಗದೆ ತಾತ ಚೌಡಯ್ಯ ಕೂಡಾ ಪ್ರಾಣ ಕಳೆದುಕೊಂಡಿದ್ದಾರೆ. ಕುಟುಂಬದ ಮೂವರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ತಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬಿನಿ ಬಲದಂಡೆ ನಾಲೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಆರೋಪದ ಮೇಲೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಕರ್ನಾಟಕ ಅಂಬೇಡ್ಕರ್ ಸೇನೆ ಸಂಘಟನೆ...