ಭಾರತ, ಮೇ 14 -- ಮಂಚನಹಳ್ಳಿ ಸಮೀಪ ಇಂದು (ಮೇ 14) ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ರಸ್ತೆ ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಘಾತದ ತೀವ್ರತೆ ಯಾವ ಪ್ರಮಾಣದಲ್ಲಿತ್ತು ಎಂದರೆ ಕೆಎಸ್‌ಆರ್‌ಟಿಸಿ ಬಸ್ ರಸ್ತೆಯಿಂದಾಚೆಗೆ ಬಲಬದಿಗೆ ಹಾರಿ ಬಿದ್ದಿದ್ದು, ಅದರ ಮುಂಭಾಗದ ಚಕ್ರದಡಿಗೆ ಕಾರು ಸಿಲುಕಿಕೊಂಡಿತ್ತು.

ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಚಾಲಕನ ಬದಿ ಮಣ್ಣಿನೊಳಗೆ ಹೂತು ಹೋದ ರೀತಿ ಆಗಿತ್ತು. ಅದರ ಎಡಬದಿಗೆ ಕಾರು ಸಿಲುಕಿ ನಜ್ಜುಗುಜ್ಜಾಗಿತ್ತು.

ಮೃತ ಕಾರು ಚಾಲಕನನ್ನು ಮೈಸೂರಿನ ಕನಕದಾಸನಗರದ ನಿವಾಸಿ ಸುನೀಲ್ (34) ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿ ರಮೇಶ್.

ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂ...