ಭಾರತ, ಫೆಬ್ರವರಿ 18 -- ಮೈಸೂರು : ಐಪಿಎಲ್ ಬೆಟ್ಟಿಂಗ್‌ ಹಾಗೂ ಆನ್‌ಲೈನ್ ಬೆಟ್ಟಿಂಗ್‌ ಮಾಡಿ ಸಾಲದ ಮೇಲೆ ಸಾಲ ಮಾಡಿದ್ದು ಮೂವರ ಸಾವಿನಲ್ಲಿ ಅಂತ್ಯವಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರನ್ನು ಈ ಆನ್‌ಲೈನ್ ಜೂಜು ಬಲಿ ಪಡೆದಿದೆ. ಮೊದಲು ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಆತನ ತಮ್ಮ ಹಾಗೂ ತಮ್ಮನ ಪತ್ನಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಫೆ.18, ಮಂಗಳವಾರ) ಬೆಳಗ್ಗೆ ಇಬ್ಬರ ಶವ ಮೈಸೂರಿನ ವಿಜಯನಗರದ ಮೈದಾನ ಬಳಿ ಪತ್ತೆಯಾಗಿದೆ.

ಸೋಮವಾರ (ಫೆ.17)ವಷ್ಟೇ ಜೋಷಿ ಆಂಥೋಣಿ ಆತ್ಮಹತ್ಯೆಗೆ ಶರಣಾಗಿದ್ದರು. ತನ್ನ ಸಾವಿಗೆ ತಮ್ಮ ಹಾಗೂ ಆತನ ಹೆಂಡತಿಯೇ ಕಾರಣ ಎಂದು ಆರೋಪಿಸಿ ವಿಡಿಯೋ ಮಾಡಿಟ್ಟು ಪ್ರಾಣ ಕಳೆದುಕೊಂಡಿದ್ದರು. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಂಚ್ಯಾ ಗ್ರಾಮದ ಬಳಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ತಮ್ಮ ಜೋಬಿ ಹಾಗೂ ಆತನ ಹೆಂಡತಿ ಶರ್ಮಿಳ ಮಾಡಿದ ಸಾಲದ ಬಗ್ಗೆ ತಿಳಿಸಿ ವಿಡಿಯೋ ಮಾಡಿದ್ದರು. ತಮ್ಮ ಹಾಗೂ ಆತನ ಹೆಂಡತಿ ಮೋಸದಿಂದ ಸಹೋದರಿಯ ಮೂಲಕ ಸಾಲ ಮಾಡಿಸಿದ್ದಾರೆ....