Bengaluru, ಮೇ 5 -- ಮೈಸೂರು: ಮೈಸೂರಿನ ಹೊರವಲಯದಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ವರುಣ ಗ್ರಾಮದ ಸನಿಹದಲ್ಲಿರುವ ಹೋಟೆಲ್ ಬಳಿ ಹತ್ಯೆ ನಡೆದಿದ್ದು, ಕೊಲೆಯಾದ ಯುವಕನನ್ನು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ. ಕೊಲೆಗೀಡಾದ ಕಾರ್ತಿಕ್ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಭಾನುವಾರ ತಡರಾತ್ರಿ ಹತ್ಯೆ ನಡೆದಿದೆ.

ಐದು ಜನರ ತಂಡದಿಂದ ದುಷ್ಕೃತ್ಯ ಎಸಗಲಾಗಿದ್ದು, ಹತ್ಯೆಯ ದೃಶ್ಯ ಹೋಟೆಲ್ ಆವರಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೀಡಾದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್ ಹಾಗೂ ಗಾಯಿತ್ರಿಪುರಂ ನಿವಾಸಿ ಪ್ರವೀಣ್ ನಡುವೆ ಈ ಹಿಂದೆ ಗಲಾಟೆಯಾಗಿತ್ತು. ನಾಲ್ಕೈದು ತಿಂಗಳ ಹಿಂದೆ ಹಣಕಾಸಿನ ವಿಚಾರಕ್ಕೆ ನಡೆದಿದ್ದ ಗಲಾಟೆಯಲ್ಲಿ, ಪ್ರವೀಣ್‌ ಎಂಬಾತನನ್ನು ಕೊಲೆ ಮಾಡುವುದಾಗಿ ಕಾರ್ತಿಕ್ ಧಮ್ಕಿ ಹಾ...