Mysuru, ಏಪ್ರಿಲ್ 25 -- ಮೈಸೂರು:ಮೈಸೂರಿನ ಹೃದಯ ಭಾಗದಲ್ಲಿರುವ ಶಿವರಾಂಪೇಟೆಯ ವಿನೋಬಾ ರಸ್ತೆಯಲ್ಲಿರುವ ಎಂ ಕೆ ಹಾಸ್ಟೆಲ್ ಗೆ ಸೇರಿದ ಖಾಲಿ ಜಾಗ ವಕ್ಫ್ ಗೆ ಸೇರಿದ ಆಸ್ತಿ ಎಂದು ನೋಟೀಸ್ ಜಾರಿ ಮಾಡಿರುವುದು ವಿವಾದಕ್ಕೆ ಕಾರಣವಾಗಿವೆ. 1916ರಲ್ಲಿ ಕಡಬದ ನಾರಾಯಣ ಶೆಟ್ಟರು ಸ್ಥಾಪಿಸಿರುವ ಸ್ಟೂಡೆಂಟ್ಸ್ ಹಾಸ್ಟೆಲ್‌ನಲ್ಲಿ ಮಕ್ಕಳು ಈಗಲೂ ಕಲಿಯುತ್ತಿದ್ದಾರೆ. ಬರುವ ಮೇ 9ರ ಒಳಗೆ ಉತ್ತರ ನೀಡುವಂತೆ ಆಂಗ್ಲ ಭಾಷೆಯಲ್ಲಿ ನೋಟೀಸ್ ಜಾರಿ ಮಾಡಿದ್ದು, ಇದಕ್ಕೆ ಭಾರೀ ಆಕ್ಷೇಪ ಕೇಳಿ ಬಂದಿದೆ. ರಾಜ್ಯದಾದ್ಯಂತ ದೊಡ್ಡ ಸದ್ದು ಮಾಡಿದ ವಕ್ಪ್ ಆಸ್ತಿ ವಿಚಾರ ತಣ್ಣಗಾಗುವ ಹೊತ್ತಲ್ಲೇ ಮೈಸೂರಿನಲ್ಲಿ ಶತಮಾನಗಳ ಇತಿಹಾಸವಿರುವ ಎಂಬಕೆ ಹಾಸ್ಟೆಲ್ ಜಾಗಕ್ಕೆ ವಕ್ಫ್ ಮಂಡಳಿಯಿಂದ ನೋಟೀಸ್‌ ಜಾರಿ ಮಾಡಿರುವುದು ಚರ್ಚೆ ಹುಟ್ಟು ಹಾಕಿದೆ.

Published by HT Digital Content Services with permission from HT Kannada....