Mysuru, ಜನವರಿ 29 -- ಮೈಸೂರು: ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಸದ್ದಾಂ ಎನ್ನುವ ಯುವಕನನ್ನು ರಕ್ಷಿಸಲು ಆಗಲಿಲ್ಲ. ಆತ ಮೃತಪಟ್ಟಿದ್ದು ಬುಧವಾರ ಬೆಳಿಗ್ಗೆ ಶವವನ್ನು ಪತ್ತೆ ಮಾಡಲಾಗಿದೆ. ಮಂಗಳವಾರ ಸಂಜೆ ಕಟ್ಟಡವನ್ನು ತೆರವು ಮಾಡುವ ಕಾರ್ಯಾಚರಣೆ ವೇಳೆ ಕಿಟಕಿ ತೆಗೆಯುವಾಗ ಕುಸಿತವಾಗಿತ್ತು. ಈ ವೇಳೆ ಹಲವು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ಓಡಿ ಬಂದರೆ ಸದ್ದಾಂ ಮಾತ್ರ ಅಲ್ಲಿಯೇ ಸಿಲುಕಿಕೊಂಡಿದ್ದ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದರಿಂದ ಸದ್ದಾಂ ಹೊರ ಬರಲು ಆಗಿರಲಿಲ್ಲ. ಅಗ್ನಿಶಾಮಕ ದಳ ಹಾಗೂ ಇತರೆ ರಕ್ಷಣಾ ಸಿಬ್ಬಂದಿಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ರಕ್ಷಿಸುವ ಪ್ರಯತ್ನ ಮಾಡಿದವು. ಆದರೂ ಬೆಳಗಿನಜಾವದವರೆಗೂ ಆಗಿರಲಿಲ್ಲ. ಬುಧವಾರ ಬೆಳಿಗ್ಗೆ ಹೊತ್ತಿಗೆ ಸದ್ದಾಂ ದೇಹ ಮಣ್ಣಿನ ಅಡಿ ಸಿಲುಕಿರುವುದು ಕಂಡು ಬಂದಿತು. ತೆಗೆಯುವ ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಸದ್ದಾಂ ಕುಟುಂಬದವರು ಹಾಗೂ ಸ್ನೇಹಿತರು ರಾತ್ರಿಯಿಡೀ ಅಲ್ಲಿಯೇ ಉಳಿದು ಸದ್ದಾಂ ಬದುಕ...