Chitradurga, ಜುಲೈ 18 -- ಚಿತ್ರದುರ್ಗ: ದೂರ ಶಿಕ್ಷಣದ ಮೂಲಕ ಪದವಿ ಹಾಗೂ ಸ್ನಾತಕೋತ್ತರ ಪಡೆಯಲು ಅವಕಾಶ ಇರುವ ಕರ್ನಾಟಕದ ಏಕೈಕ ದೂರ ಶಿಕ್ಷಣ ವಿಶ್ವವಿದ್ಯಾನಿಲಯ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2025-26ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ. ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಲಿಬ್, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಎಂ.ಎ, ಎಂ.ಕಾಂ, ಎಂ.ಎ, ಎಂ.ಸಿ.ಜೆ, ಎಂ.ಲಿಬ್, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಮತ್ತು ಪಿಜಿ ಡಿಪ್ಲೊಮಾ, ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‍ಗಳ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಪ್ರವೇಶಾತಿ ಪ್ರಕ್ರಿಯೆಯು ಈಗಾಗಲೇ 2025ರ ಜುಲೈ 01 ರಿಂದ ಪ್ರಾರಂಭವಾಗಿದೆ.

ಆಸಕ್ತ ವಿದ್ಯಾರ್ಥಿಗಳು ವಿವಿಧ ಪದವಿ, ಕೋರ್ಸ್‍ಗಳ ಪ್ರವೇಶಾತಿಗೆ ಆನ್‍ಲೈನ್ ಅಡ್ಮಿಷನ್ ಪೋರ್ಟ್‍ಲ್ https://ksouportal.com/views/studentHome.aspx ನಲ್ಲಿ ಆನ್‍ಲೈನ್ ಮೂಲಕ ಪ...