Mysuru, ಫೆಬ್ರವರಿ 28 -- ಮೈಸೂರು: ಮೈಸೂರಿನಲ್ಲಿ ಚಿರತೆ ಉಪಟಳ ಕೊಂಚೆ ಹೆಚ್ಚೇ ಇದೆ. ಕಳೆದ ತಿಂಗಳು ಮೈಸೂರಿನ ಇನ್ಫೋಸಿಸ್‌ನಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯಲು ಆಗಲೇ ಇಲ್ಲ. ಇದಾದ ಕೆಲವೇ ದಿನದಲ್ಲಿ ಮೈಸೂರಿನ ಆರ್‌ಬಿಐ ನೋಟು ಮುದ್ರಣಾಲಯ ಘಟಕದಲ್ಲಿ ಕಂಡಿರುವ ಮಾಹಿತಿ ಬಂದಿತ್ತು. ಅಲ್ಲಿಗೆ ಸಮೀಪದ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಒಂದರ ಆವರಣದಲ್ಲೂ ಚಿರತೆ ಬಂದು ಹೋಗಿತ್ತು. ಇದನ್ನು ಸುಳ್ಳು ಎಂದು ಹೇಳಿಕೆ ನೀಡಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಸಮೀಪದಲ್ಲಿಯೇ ಚಿರತೆಯೊಂದನ್ನು ಶುಕ್ರವಾರ ಸೆರೆ ಹಿಡಿದಿದ್ದಾರೆ. ಅಪಾರ್ಟ್‌ಮೆಂಟ್‌ಗೆ ಒಂದೆರಡು ಕಿ.ಮಿ. ದೂರದಲ್ಲಿರುವ ಆರ್‌ಬಿಐ ನೋಟು ಮುದ್ರಣಾಲಯ ಘಟಕದ ಸಮೀಪವೇ ಭಾರೀ ಗಾತ್ರದ ಚಿರತೆ ಸೆರೆ ಸಿಕ್ಕಿದೆ. ಇದನ್ನು ಈಗ ಅರಣ್ಯ ಇಲಾಖೆಯೇ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.

ಮೂರು ವಾರದಿಂದಲೂ ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಆರ್‌ಬಿಐ ನೋಟು ಮುದ್ರಣ ಘಟಕದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆ ಚಿರತೆ ...