ಭಾರತ, ಫೆಬ್ರವರಿ 22 -- ಮೈಸೂರಿನಲ್ಲಿ ಒಂದೇ ದಿನದೊಳಗೆ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ವಸ್ತುಪ್ರದರ್ಶನ ಆವರಣದಲ್ಲಿ‌ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಟ ಡಾಲಿ ಧನಂಜಯ್ ಮದುವೆಗೆ ಹಾಕಲಾಗಿದ್ದ ಸೆಟ್‌ನ ಪಕ್ಕದಲ್ಲೇ ದುರಂತ ಸಂಭವಿಸಿದೆ. ಬೆಂಕಿಯಿಂದಾಗಿ ಆಸುಪಾಸಿನ ಬಡಾವಣೆಗಳಲ್ಲಿ ದಟ್ಟ ಹೊಗೆ ಆವರಿಸಿದೆ. ವಸ್ತು ಪ್ರದರ್ಶನ ಆವರಣದಲ್ಲಿ ಹಾಕಲಾಗಿದ್ದ ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಆವರಣದ ಎರಡು ಮರಗಳು ಕೂಡ ಬೆಂಕಿಗಾಹುತಿಯಾಗಿದೆ. ಥರ್ಮಕೋಲ್ ಸೇರಿದಂತೆ ಹಲವು ತ್ಯಾಜ್ಯಗಳು ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಮೈಸೂರಿನ ವಸ್ತು ಪ್ರದರ್ಶನ ಆವರಣ 83 ಎಕರೆಗಳಷ್ಟು ವ್ಯಾಪಿಸಿದೆ. ಇತ್ತೀಚೆಗಷ್ಟೇ ಇಲ್ಲಿ ಎಕ್ಸಿಬಿಷನ್ ನಡೆದಿತ್ತು. ಆ ವೇಳೆ ಹಾಕಲಾಗಿದ್ದ ಮಳಿಗೆಗಳ ತ್ಯಾಜ್ಯವನ್ನು ಇಲ್ಲಿ ಹಾಕಲಾಗಿದೆ. ಕಸ ವಿಂಗಡಣೆ ಮಾಡಿದ ಬಳಿಕ ಅದನ್ನು ಆಚೆ ಹಾಕುವ ಕೆಲಸ ನಡೆಯಬೇಕಿತ್ತು. ಅಷ್ಟರಲ್ಲೇ ಯಾರೋ ಕಿಡಿಗೇಡಿಗಳು ಕಸಕ್ಕೆ...