Mysuru, ಮೇ 2 -- ಮೈಸೂರು ಮಾತ್ರವಲ್ಲದೇ ಕರ್ನಾಟಕದ ನಾನಾ ಭಾಗಗಳಲ್ಲಿ ವಿವಿಧ ಹಣ್ಣು, ಕಾಳುಗಳು, ಬೀಜಗಳು, ಕೃಷಿ ಉತ್ಪನ್ನಗಳ ಮೇಳಗಳನ್ನು ಆಯೋಜಿಸುತ್ತಾ ಬರುತ್ತಿರುವ ಸಹಜ ಸಮೃದ್ದ ಈ ಬಾರಿ ಮೈಸೂರಿನಲ್ಲಿ ಹಲಸು ಮೇಳವನ್ನು ಮೇ ರಂದು ಹಮ್ಮಿಕೊಂಡಿದೆ. ಜನರಲ್ಲಿ ದೇಸಿ ಹಣ್ಣು, ಆಹಾರ ಮಹತ್ವ ತಿಳಿಸುವ ನಿಟ್ಟಿನಲ್ಲಿ ಸಹಜ ಸಮೃದ್ದ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ಈಗಾಗಲೇ ಹಲಸಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದ್ದರೂ ಸಹಜ ಸಮೃದ್ದದ ಮೇಳದಲ್ಲಿ ಖುದ್ದು ಹಲಸು ಬೆಳೆದವರೇ ವಿವಿಧ ಬಗೆಯ ಹಲಸಿನ ಹಣ್ಣನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ಹಲಸಿನ ಕೃಷಿ ಕುರಿತು ತರಬೇತಿ ಕಾರ್ಯಕ್ರಮ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಹಲಸು ಎತ್ತುವ, ತೂಕ ಊಹಿಸುವ ವಿಭಿನ್ನ ಸ್ಪರ್ಧೆಗಳೂ ಈ ಬಾರಿಯ ಆಕರ್ಷಣೆಯಾಗಲಿವೆ. ಮೈಸೂರಿನ ಮೆಟ್ರೋಪೋಲ್‌ ವೃತ್ತದಲ್ಲಿರುವ ನಂಜರಾಜ ಬಹದ್ದೂರು ಛತ್ರದಲ್ಲಿ ಹಲಸಿನ ಮೇಳ ನಡೆಯಲಿದೆ. ಮೇಳಕ್ಕೆ ಬಂದವರು ಹಲಸಿನ ಕುರಿತು ತಿಳಿದುಕೊಳ್ಳಬಹುದು. ಅಲ್ಲದೇ ಹಲಸಿನ ವಿವಿಧ ತಳಿಗಳ ...