Mysuru, ಏಪ್ರಿಲ್ 24 -- ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಅಂತರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಮಾಡಬೇಕು ಎನ್ನುವುದು ದಶಕಗಳ ಬೇಡಿಕೆ. ಆದರೆ ಸೂಕ್ತ ಸ್ಥಳವೇ ಸಿಗದೇ ವಿಳಂಬವಾಗುತ್ತಲೇ ಇದೆ.

ಮೈಸೂರಿನಲ್ಲಿ ಅಂತರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಆರಂಭಿಸಲು ಮೊದಲು ಹಂಚ್ಯಾ ಸಾತಗಳ್ಳಿ ಬಳಿ ಜಮೀನು ಗುರುತಿಸಲಾಯಿತು. ಆದರೆ ಭೂಮಿ ಗೊಂದಲದಿಂದ ಇದು ರದ್ದಾಯಿತು.

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸದ್ಯ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣ ಇದ್ದರೂ ಅದು ರಣಜಿ ಪಂದ್ಯಾವಳಿಗೆ ಮಾತ್ರ ಸೀಮಿತವಾಗಲಿದೆ.

ಆದರೆ ಮೈಸೂರಿಗೆ ಅಂತರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಬೇಕೇ ಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರಿಂದ ಈಗ ಇಪ್ಪತ್ತು ಎಕರೆ ಭೂಮಿಯನ್ನು ಮೈಸೂರು- ಮಂಗಳೂರು ರಸ್ತೆಯ ಇಲವಾಲ ಸಮೀಪದ ಹುಯಿಲಾಳಿನಲ್ಲಿ ಗುರುತಿಸಲಾಗಿದೆ.

ಮೈಸೂರಿನಲ್ಲಿ ಕ್ರಿಕೆಟ್‌ ಸಹಿತ ಹಲವು ರೀತಿಯ ಕ್ರೀಡೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹವಿದೆ. ಮೈಸೂರಿನಲ್ಲಿ ಚಾಮುಂಡಿವಿಹಾರ ಹಾಗೂ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣಗಳಿವೆ.

ಈ ಕಾರಣದಿಂದಲೇ ಅ...